ಉದ್ಯೋಗಿಗಳಿಗೆ ʼನಿದ್ರೆʼ ಯನ್ನೇ ಉಡುಗೊರೆಯಾಗಿ ಘೋಷಿಸಿದ ಬೆಂಗಳೂರು ಮೂಲದ ಕಂಪನಿ…!

ಬೆಂಗಳೂರು ಮೂಲದ ಕಂಪನಿಯೊಂದು ಮಾರ್ಚ್ 17ರಂದು ’ವಿಶ್ವ ನಿದ್ರೆ ದಿನ’ಕ್ಕೆಂದು ತನ್ನ ಉದ್ಯೋಗಿಗಳಿಗೆ ರಜೆ ತೆಗೆದುಕೊಳ್ಳುವ ಆಯ್ಕೆ ನೀಡುವ ಮೂಲಕ ತನ್ನ ಸಿಬ್ಬಂದಿ ವರ್ಗದಲ್ಲಿ ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳಲು ಉತ್ತೇಜನಾಕಾರಿ ಹೆಜ್ಜೆ ಇಟ್ಟಿದೆ.

ತನ್ನ ಫರ್ನಿಶಿಂಗ್ ಉತ್ಪನ್ನಗಳಿಂದ ಜನಪ್ರಿಯವಾಗಿರುವ ವೇಕ್‌ಫಿಟ್ ಸೊಲ್ಯೂಶನ್ಸ್‌ ಹೆಸರಿನ ಡಿ2ಸಿ ಹೋಮ್-ಅಂಡ್-ಸ್ಲೀಪ್ ಪರಿಹಾರಗಳ ಕಂಪನಿ ತಾನು ಈ ಸಂಬಂಧ ತನ್ನೆಲ್ಲಾ ಉದ್ಯೋಗಿಗಳಿಗೆ ಕಳುಹಿಸಿರುವ ಸ್ಕ್ರೀನ್‌ಶಾಟ್ ಅನ್ನು ಲಿಂಕ್ಡಿನ್‌ನಲ್ಲಿ ಶೇರ್‌ ಮಾಡಿಕೊಂಡಿದೆ.

“ವಿಶ್ವ ನಿದ್ರೆ ದಿನಾಚರಣೆ ಪ್ರಯುಕ್ರ, ವೇಕ್‌ಫಿಟ್‌ನ ಎಲ್ಲಾ ಉದ್ಯೋಗಿಗಳಿಗೆ ಮಾರ್ಚ್ 17, 2023ರಂದು ರಜೆ ನೀಡಲಾಗಿದೆ – ಮತ್ತು ದೀರ್ಘ ವಾರಾಂತ್ಯವೂ ಹಿಂದೆಯೇ ಬರುವ ಕಾರಣ, ಅಗತ್ಯವಾಗಿ ಬೇಕಿರುವ ವಿಶ್ರಾಂತಿ ಪಡೆಯಲು ಇದೊಂದು ಸದಾವಕಾಶವಾಗಿದೆ,” ಎಂದು ವೇಕ್‌ಫಿಟ್ ತಿಳಿಸಿದೆ.

“ಅಚ್ಚರಿಯ ರಜೆ: ನಿದ್ರೆಯ ಉಡುಗೊರೆಯನ್ನು ಘೋಷಿಸುತ್ತಿದ್ದೇವೆ” ಎಂದು ಈ ಇ-ಮೇಲ್‌ಗೆ ಟೈಟಲ್ ಕೊಟ್ಟಿದೆ ವೇಕ್‌ಫಿಟ್.

No alternative text description for this image

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read