Bengaluru : ಮಹಿಳೆಯರೇ ಎಚ್ಚರ : ಸ್ನಾನ ಮಾಡುವಾಗ ವಿಡಿಯೋ ಸೆರೆ ಹಿಡಿದ ಕಾಮುಕ ‘ಜಿಮ್ ಕೋಚ್’ ಅರೆಸ್ಟ್

ಬೆಂಗಳೂರು : ಮಹಿಳೆ ಸ್ನಾನ ಮಾಡುವಾಗ ವಿಡಿಯೋ ಮಾಡ್ತಿದ್ದ ಕಾಮುಕ ‘ಜಿಮ್ ಕೋಚ್’ ನನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ರಾಮಮೂರ್ತಿ ನಗರದ ಕಲ್ಟ್ ಫಿಟ್ನೆಸ್ ಸೆಂಟರ್ನಲ್ಲಿ ಮಹಿಳೆಯೊಬ್ಬರು ಸ್ನಾನ ಮಾಡುತ್ತಿರುವುದನ್ನು ಚಿತ್ರೀಕರಿಸಿದ ಜಿಮ್ ತರಬೇತುದಾರನನ್ನು ನಗರ ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ಸಿಬಿಯಾಚನ್ ಕೆ.ಎಸ್ ಎಂದು ಗುರುತಿಸಲಾಗಿದೆ. ರಾಮಮೂರ್ತಿ ನಗರ ಪೊಲೀಸರು ಆರೋಪಿಯನ್ನು ಬಂಧಿಸಿ ಐಪಿಸಿ ಸೆಕ್ಷನ್ 1860 (ಯು / ಎಸ್ -354 ಸಿ – ಖಾಸಗಿ ಕೃತ್ಯದಲ್ಲಿ ತೊಡಗಿರುವ ಮಹಿಳೆಯ ಚಿತ್ರವನ್ನು ನೋಡುವುದು ಅಥವಾ ಸೆರೆಹಿಡಿಯುವುದು) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಎಫ್ಐಆರ್ ಪ್ರಕಾರ, ಅಕ್ಷಯ್ ನಗರದ ನಿವಾಸಿ 29 ವರ್ಷದ ಸಂತ್ರಸ್ತೆ ಬ್ಯಾಡ್ಮಿಂಟನ್ ಮತ್ತು ಈಜು ಕಲಿಯಲು ಸೆಪ್ಟೆಂಬರ್ನಲ್ಲಿ ಕಲ್ಟ್ ಫಿಟ್ನೆಸ್ ಕೇಂದ್ರಕ್ಕೆ ಸೇರಿದರು. ಆರೋಪಿ ಸಿಬಿಯಾಚನ್ ಕಳೆದ ಎರಡು ತಿಂಗಳಿನಿಂದ ಮಹಿಳೆಗೆ ತರಬೇತಿ ನೀಡುತ್ತಿದ್ದ. ನವೆಂಬರ್ 5 ರಂದು ಮಹಿಳೆ ತರಬೇತಿಯ ನಂತರ ಫಿಟ್ನೆಸ್ ಕೇಂದ್ರದಲ್ಲಿ ಸ್ನಾನ ಮಾಡುತ್ತಿದ್ದರು.

ರಾಮಮೂರ್ತಿ ನಗರದ ಪೊಲೀಸ್ ಠಾಣಾ ವ್ಯಾಪ್ತಿಯ ಫಿಟ್ನೆಸ್ ಸೆಂಟರ್ ನಲ್ಲಿ ವರ್ಕೌಟ್ ಮುಗಿಸಿದ್ದ ಯುವತಿ ಸ್ನಾನ ಮಾಡಲೆಂದು ಬಾತ್ ರೂಂ ಹೋಗಿದ್ದರು. ಈ ವೇಳೆ ಈತ ಕಿಟಕಿಯಿಂದ ವಿಡಿಯೋ ಮಾಡಲು ಯತ್ನಿಸಿದ್ದಾನೆ. ಅನುಮಾನಗೊಂಡ ಯವತಿ ಬಾತ್ ರೂನಿಂದ ಹೊರಗೆ ಬಂದಿದ್ದಾರೆ, ಆದರೆ ಅಲ್ಲಿ ಯಾರೂ ಇರಲಿಲ್ಲ. ನಂತರ ಸಿಸಿಟಿವಿ ಪರಿಶೀಲನೆ ನಡೆಸಿದಾಗ ಕಾಮುಕನ ಅಸಲಿ ಬಣ್ಣ ಬಯಲಾಗಿದೆ.

ಈ ಸಂಬಂಧ ಯುವತಿ ರಾಮಮೂರ್ತಿ ನಗರ ಪೊಲೀಸರಿಗೆ ದೂರು ನೀಡಿದ್ದು, ಆರೋಪಿ ಕೋಚ್ ಸಿಬಿಯಾಚನ್ ನನ್ನು ಬಂಧಿಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read