ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಪೀಣ್ಯದಲ್ಲಿ ನಡೆದಿದೆ.
ಪೀಣ್ಯದ ಪಂಚಮುಖಿ ಲೇಔಟ್ ನಲ್ಲಿ ಯುವಕನೊಬ್ಬನ ಶವ ಪತ್ತೆಯಾಗಿದೆ. ಮೃತದೇಹದ ಮುಖ, ದೇಹ, ಕೈ-ಕಾಲುಗಳ ಮೇಲೆ ಹಲ್ಲೆ ನಡೆಸಲಾಗಿರುವ ಸ್ಥಿತಿಯಲ್ಲಿ ಬಟ್ಟೆಯಲ್ಲಿ ಸುತ್ತಿಟ್ಟ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.
ಯುವಕನನ್ನು ಬೇರೆಡೆ ಹತ್ಯೆ ಮಾಡಿ ಪಂಚಮುಖಿ ಲೇಔಟ್ ಬಳಿ ಮೃತದೇಹ ಬಿಸಾಕಿ ಹೋಗಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ.