ಬೆಂಗಳೂರು: ಗಣೇಶೋತ್ಸವದ ವೇಳೆ ಇಡೀ ಬೆಂಗಳೂರಿಗರನ್ನು ಬೆಚ್ಚಿ ಬೀಳಿಸಿದ್ದ ಕುಖ್ಯಾತ ಸರಗಳ್ಳನನ್ನು ಗಿರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸರಗಳ್ಳ ಕೆಂಗೇರಿ ಪ್ರವೀಣ್ ಬಂಧಿತ ಆರೋಪಿ. ಮತ್ತೋರ್ವ ಸರಗಳ್ಳ ಯೋಗಾನಂದ್ ಪರಾರಿಯಾಗಿದ್ದಾನೆ. ರಾಮನಗರ ಮೂಲದ ಯೋಗಾನಂದ್ ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಸೆ.೧೪ರಂದು ರಾತ್ರಿ ಬೆಂಗಳೂರಿನ ಐದು ಕಡೆ ಪ್ರವೀಣ್ ಹಾಗೂ ಯೋಗಾನಂದ್ ಸರಗಳ್ಳತನ ಮಾಡಿದ್ದರು. ಗಿರಿನಗರ, ಹನುಮಂತನಗರ, ಕೋಣನಕುಂಟೆಯಲ್ಲಿ ಸರಗಳ್ಳತನ ನಡೆದಿದಿತ್ತು. ಮಹಿಳೆಯರ ಕುತ್ತಿಗೆಗೆ ಲಾಂಗ್ ಹಿಡಿದು ಸರಗಳ್ಳತನ ನಡೆಸುತ್ತಿದ್ದರು.
ಗಿರಿನಗರದಲ್ಲಿ ಪ್ರತಿರೋಧಿಸಿದ್ದ ಮಹಿಳೆಯ ಕುತ್ತಿಗೆಗೆ ಲಾಂಗ್ ಇಟ್ಟಿದ್ದರು. ತಪ್ಪಿಸಿಕೊಳ್ಳಲು ಯತ್ನಿಸಿದ್ದಾಗ ಮಹಿಳೆಯ ಕೈ ಬೆರಳು ತುಂಡಾಗಿತ್ತು. ಇದೀಗ ಗಿರಿನಗರ ಠಾಣೆ ಪೊಲೀಸರು ಸರಗಳ್ಳ ಪ್ರವೀಣ್ ನನ್ನು ಬಂಧಿಸಿದ್ದಾರೆ. ಈತನ ಬಂಧನವಾಗುತ್ತಿದ್ದಂತೆ ಯೋಗಾನಂದ್ ಪರಾರಿಯಾಗಿದ್ದಾನೆ.