ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಹಾಡಹಗಲೇ 7.11 ಕೋಟಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್, ಬೆಂಗಳೂರಿನಲ್ಲಿ ಇಂಥಾ ಕೃತ್ಯ ಇದೇ ಮೊದಲು. ಇಷ್ಟೊಂದು ದೊಡ್ಡ ಮಟ್ಟದಲ್ಲಿ ಹಾಡಹಗಲೇ ದರೋಡೆ ಎಂದೂ ನಡೆದಿರಲಿಲ್ಲ. ಶೀಘ್ರದಲ್ಲಿಯೇ ದರೋಡೆಕೋರರನ್ನು ಹಿಡಿಯಲಾಗುವುದು ಎಂದರು.
ದರೋಡೆ ಕೋರರ ಬಗ್ಗೆ ಕೆಲ ಮಾಹಿತಿಗಳು ಲಭ್ಯವಾಗಿವೆ. ಅತಿ ಶೀಘ್ರವಾಗಿ ಎಲ್ಲರನ್ನೂ ಹಿಡಿದು ಹಾಕುತ್ತೇವೆ. ಯಾರನ್ನೂ ಬಿಡಲ್ಲ ಎಂದು ಹೇಳಿದರು.
