ಬೆಂಗಳೂರು: ವರುಣಾರ್ಭಟಕ್ಕೆ ರಾಜ್ಯ ರಾಜಧಾನಿ ಬೆಂಗಳೂರಿನ ಜನತೆ ತತ್ತರಿಸಿ ಹೋಗಿದ್ದಾರೆ. ಪ್ರತಿಷ್ಠಿತ ಬಡಾವಣೆಗಳು ಜಲಾವೃತಗೊಂಡೊದ್ದು, ಮನೆಗಳಿಗೆ ನೀರು ನುಗ್ಗಿ ಜನರ ಬದುಕು ದುಸ್ತರವಾಗಿದೆ.
ಬೆಂಗಳೂರಿನ ಸಾಯಿಲೇಔಟ್ ಮಳೆಯ ಅಬ್ಬರಕ್ಕೆ ದ್ವೀಪವಾಗಿ ಪರಿಣಮಿಸಿದೆ. ಸಾಯಿಲೇಔಟ್ ಸುತ್ತಮುತ್ತಲು ರಾಜಕಾಲುವೆಯ ನೀರು ನಿಂತಿದೆ. ಮತ್ತೊಂದೆಡೆ ಲೇಔಟ್ ಒಅಳ ಭಾಗಕ್ಕೂ ನೀರು ನುಗ್ಗಿದ್ದು, ಇಲ್ಲಿನ ನಿವಾಸಿಗಳು ಹೊರಬರಲಾಗದ ಸ್ಥಿತಿ ನಿರ್ಮಾಣವಾಗಿದೆ.
ಸಾಯಿಲೇಔಟ್ ನ ಒಳಗೆ ಎದೆಯ ಮಟ್ಟದಲ್ಲಿ ನೀರು ನಿಂತಿದೆ. ಮನೆಯ ಬೇಸ್ ಮೆಂಟ್, ಮೊದಲ ಮಹಡಿವರೆಗೂ ನೀರು ನಿಂತಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ. ರಾಜಕಾಲುವೆಯ ನೀರು ಅಪಾರ್ಟ್ ಮೆಂಟ್, ಮನೆಗಳಿಗೆ ನುಗ್ಗಿದ್ದು, ಅಲ್ಲೋಲಕಲ್ಲೋಲ ಸೃಷ್ಟಿಯಾಗಿದೆ.
ಬಿಬಿಎಂಪಿ ಅಧಿಕಾರಿಗಳು ಸಿಬ್ಬಂದಿಗಳು ಇಲ್ಲಿನ ನಿವಾಸಿಗಳನ್ನು ಬೋಟ್ ಮೂಲಕ ಬೇರೆ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯ ಮಾಡುತ್ತಿದ್ದಾರೆ. ಮಳೆಯ ನೀರು ಕಡಿಮೆಯಾಗುವವರೆಗೂ ಸುರಕ್ಷಿತ ಸ್ಥಳಗಳಲ್ಲಿ ವಾಸ್ತವ್ಯಕ್ಕೆ ಹಾಗೂ ಊಟದ ವ್ಯವಸ್ಥೆ ಮಾಡುವುದಾಗಿ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.