ಬೆಂಗಳೂರು: ಬೆಂಗಳೂರಿನಲ್ಲಿ ಪುಡಿರೌಡಿಗಳ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಗಾಂಜಾ ಮತ್ತಿನಲ್ಲಿ ಪುಡಿರೌಡಿಯೊಬ್ಬ ಸಿಕ್ಕ ಸಿಕ್ಕ ವಾಹನಗಳ ಗಾಜು ಒಡೆದು ಹಾಕಿರುವ ಘಟನೆ ಕೆ.ಆರ್.ಪುರಂ ಮಾರ್ಕೆಟ್ ಬಳಿ ನಡೆದಿದೆ.
ಪುಡಿರೌಡಿಯೊಬ್ಬ ಲಾಂಗ್ ಹಿಡಿದು ಕಾರು, ಗೂಡ್ಸ್ ವಾಹನಗಳ ಗ್ಲಾಸ್ ಒಡೆದು ಪುಡಿ ಪುಡಿ ಮಾಡಿದ್ದಾನೆ. ಸಾಲದ್ದಕ್ಕೆ ಲಾಂಗ್ ಹಿಡಿದು ಜನರಿಗೆ ಆವಾಸ್ ಹಾಕಿ ಬೆದರಿಕೆಯೊಡ್ಡಿದ್ದಾನೆ.
ಸಾರ್ವಜನಿಕರು ಪೌಡಿರೌಡಿಯನ್ನು ಹಿಡಿದು ಕೆ.ಆರ್.ಪುರಂ ಠಾಣೆಯ ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.