ಬೆಂಗಳೂರು: ಕಸ ಸಂಗ್ರಹಣೆಗೆ ಬರುವ ಆಟೋಗಳಿಗೆ ಹಸಿಕಸ, ಒಣ ಕಸಗಳನ್ನು ಬೇರ್ಪಡಿಸಿ ನೀಡಬೇಕು ಎಂದು ಘನತ್ಯಾಜ್ಯ ನಿರ್ವಹಣೆ ನಿಗಮ ಆದೇಶ ಹೊರಡಿಸಿದೆ. ಅಲ್ಲದೇ ಕೆಲ ದಿನಗಳಿಂದ ಕಸ ಸಂಗ್ರಹಿಸುವ ವಾಹನಗಳ ಸಮಯ ಕೂಡ ಬಲಾವಣೆಯಾಗಿದ್ದು, 5:30ರಿಂದಲೇ ಕಸ ಸಂಗ್ರಹ ಆರಂಭವಾಗಿದೆ.
ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಕಸದ ಆಟೋಗಳಿಗೆ ಕಸ ನೀಡದ ಮನೆಗಳಿಗೆ ಬಿಬಿಎಂಪಿ ನೋಟಿಸ್ ನೀಡಲು ಮುಂದಾಗಿದೆ. ಅಲ್ಲದೇ ಕಟ್ತಡ ನಿರ್ಮಾಣಗಳ ಅವಶೇಷಗಳನ್ನು ಎಲ್ಲೆಂದರಲ್ಲಿ ಬಿಸಾಕಲಾಗುತ್ತಿದ್ದು, ಅವುಗಳನ್ನು ಘನತ್ಯಾಜ್ಯ ನಿರ್ವಹಣಾ ನಿಯಮಿತದಿಂದಲೇ ವಿಲೇವಾರಿ ಮಾಡಲು ಚಿಂತನೆ ನಡೆಸಿದೆ.
ವಿಲೇವಾರಿ ವ್ಯಚ್ಚವನ್ನು ಕಟ್ಟಡದ ಮಾಲೀಕರು ಭರಿಸಬೇಕು ಎಂದು ಸೂಚನೆ ನೀಡಲು ಸಿದ್ಧತೆ ನಡೆಸಿದೆ.