ಬದುಕಿದ್ದ ಮಗುವಿಗೆ ಡೆತ್‌ ಸರ್ಟಿಫಿಕೇಟ್;‌ ಶವ ಸಂಸ್ಕಾರಕ್ಕೆ ಹೋದಾಗ ಸತ್ಯ ಬಹಿರಂಗ

ಪಶ್ಚಿಮ ಬಂಗಾಳದ ಸರ್ಕಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯು  ಬದುಕಿದ್ದ ನವಜಾತ ಶಿಶುವಿಗೆ ಮರಣ ಪ್ರಮಾಣಪತ್ರವನ್ನು ನೀಡಿದ ಘಟನೆ ನಡೆದಿದೆ. ಆದರೆ ಆ ಮಗು ಬದುಕಿರುವುದು ಶವ ಸಂಸ್ಕಾರದ ಸಂದರ್ಭದಲ್ಲಿ ಗೊತ್ತಾಗಿದೆ.

ಪಶ್ಚಿಮ ಮಿಡ್ನಾಪುರ ಜಿಲ್ಲೆಯ ಘಟಾಲ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಶನಿವಾರದಂದು ಗಾರ್ಬೆಟರ್ ಪಟ್ಟಣದ ಕುಟುಂಬಕ್ಕೆ ಮಗುವಿನ ಮರಣ ಪ್ರಮಾಣಪತ್ರವನ್ನು ಆಸ್ಪತ್ರೆ ನೀಡಿದೆ. ನವಜಾತ ಶಿಶು ಸಾವನ್ನಪ್ಪಿದೆ ಎಂದು ಇದರಲ್ಲಿ ಹೇಳಲಾಗಿದೆ.

ಸುದ್ದಿ ತಿಳಿದ ನೊಂದ ತಾಯಿ ಶೇಷ್ಕಾ ಮೊನಾಲಿಯಾ ಬೀಬಿ ಹಾಗೂ ಕುಟುಂಬದವರು ಎರಡು ದಿನದ ಮಗುವಿನ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸಿದ್ದಾರೆ.

ಆದರೆ, ಶವಸಂಸ್ಕಾರಕ್ಕೆ ಕೊಂಡೊಯ್ಯುವಾಗ ನವಜಾತ ಶಿಶು ಚಲಿಸಿ ಉಸಿರಾಡಿದೆ. ಆ ನಂತರ, ಶಿಶುವನ್ನು ತಕ್ಷಣವೇ ಘಟಲ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಸ್ವಲ್ಪ ಸಮಯದ ನಂತರ ಮಗು ಸಾವನ್ನಪ್ಪಿತು.

ಆಸ್ಪತ್ರೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ತನ್ನ ಮಗುವನ್ನು “ಕೊಲೆ” ಮಾಡಲಾಗಿದೆ ಎಂದು ಮಗುವಿನ ತಂದೆ ಹೇಳಿಕೊಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read