ಕರಿಬೇವಿನ ಜ್ಯೂಸ್ ನಲ್ಲಿದೆ ಇಷ್ಟೆಲ್ಲಾ ಆರೋಗ್ಯ ಲಾಭ

ಒಗ್ಗರಣೆಗೆ ಅಗತ್ಯವಾಗಿ ಬಳಸುವ ಕರಿಬೇವಿನ ಎಲೆ ಸಾಂಬಾರ್, ಕರಿ, ಚಟ್ನಿ ರುಚಿಯನ್ನು ಹೆಚ್ಚಿಸುತ್ತದೆ. ದಕ್ಷಿಣ ಭಾರತದಲ್ಲಿ ಕರಿಬೇವು ಹೆಚ್ಚು ಪ್ರಸಿದ್ಧಿ ಪಡೆದಿದೆ. ಇದು ರುಚಿ ಮಾತ್ರ ಹೆಚ್ಚಿಸುವುದಿಲ್ಲ. ಬದಲಾಗಿ ಆರೋಗ್ಯಕ್ಕೂ ಒಳ್ಳೆಯದು. ಕರಿಬೇವಿನಲ್ಲಿ ಕಬ್ಬಿಣ, ಸತು, ತಾಮ್ರ, ಕ್ಯಾಲ್ಸಿಯಂ, ವಿಟಮಿನ್ ಎ ಮತ್ತು ಬಿ, ಅಮೈನೋ ಆಮ್ಲಗಳು, ಪ್ರೋಟೀನ್, ಕಾರ್ಬೋಹೈಡ್ರೇಟ್ ಗಳು ಮತ್ತು ಫೋಲಿಕ್ ಆಮ್ಲದಂತಹ ಪೋಷಕಾಂಶಗಳಿವೆ. ಕರಿಬೇವಿನ ರಸ ತಯಾರಿಸಿ ಸೇವನೆ ಮಾಡುವುದ್ರಿಂದ ಏನೆಲ್ಲ ಲಾಭವಿದೆ ಎಂಬುದರ ವಿವರ ಇಲ್ಲಿದೆ.

ಕರಿಬೇವನ್ನ ಸ್ವಚ್ಛವಾಗಿ ತೊಳೆದು ಮಿಕ್ಸಿ ಜಾರಿಗೆ ಹಾಕಿ. ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಿ. ಮಿಶ್ರಣ ನುಣ್ಣಗಾದ ಮೇಲೆ ಅದಕ್ಕೆ ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಿ. ನಂತ್ರ ಅದನ್ನು ಜರಡಿ ಹಿಡಿದು ಆ ನೀರನ್ನು ಸೇವನೆ ಮಾಡಿ. 15-20 ಕರಿಬೇವಿನ ಎಲೆಯನ್ನು ನೀರಿನಲ್ಲಿ ಕುದಿಸಿ, ಜರಡಿ ಹಿಡಿದು ಜೇನುತುಪ್ಪ ಅಥವಾ ನಿಂಬೆ ರಸವನ್ನು ಬೆರೆಸಿ ಸೇವನೆ ಮಾಡಿ.

ಕರಿಬೇವಿನ ಎಲೆ ರಸವನ್ನು ಸೇವಿಸುವುದರಿಂದ ರಕ್ತಹೀನತೆಯ ಸಮಸ್ಯೆ ಕಡಿಮೆಯಾಗುತ್ತದೆ. ದೇಹದಿಂದ ವಿಷಕಾರಿ ಅಂಶಗಳನ್ನು ತೆಗೆದುಹಾಕುವುದರ ಮೂಲಕ ದೇಹವನ್ನು ಶುದ್ಧಗೊಳಿಸುತ್ತದೆ. ಹೆಚ್ಚುವರಿ ಕೊಬ್ಬನ್ನು ತೆಗೆದುಹಾಕುವಲ್ಲಿ ಸಹಕಾರಿ. ಕರಿಬೇವಿನ ಎಲೆ ರಸವು ತೂಕವನ್ನು ಕಡಿಮೆ ಮಾಡಲು ಸಾಕಷ್ಟು ಸಹಾಯ ಮಾಡುತ್ತದೆ. ರಸವನ್ನು ಕುಡಿಯಲು ಇಷ್ಟಪಡದವರು ಎಲೆಗಳನ್ನು ಆಹಾರದೊಂದಿಗೆ ಸೇವಿಸಬಹುದು.

ಕರಿಬೇವಿನ ಎಲೆ ರಸವು ದೃಷ್ಟಿ ಸಮಸ್ಯೆ ಕಡಿಮೆ ಮಾಡುತ್ತದೆ. ಬರಿ ಎಲೆಯನ್ನು ಕೂಡ ನೀವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಬಹುದು. ಕರಿಬೇವಿನ ಎಲೆ ರಸ ಜೀರ್ಣಾಂಗ ವ್ಯವಸ್ಥೆಯನ್ನು ಬಲಗೊಳ್ಳುತ್ತದೆ. ಅನಿಲ, ಹೊಟ್ಟೆ ಅಜೀರ್ಣ ಸಮಸ್ಯೆ ಕಡಿಮೆ ಮಾಡುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಮೂಲಕ ಮಧುಮೇಹ ರೋಗಿಗೆ ನೆಮ್ಮದಿ ನೀಡುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read