ಪ್ರೀತಿಯ ಶಿಕ್ಷಕ ವರ್ಗಾವಣೆ : ಪ್ಲೀಸ್ ಸರ್….ಬಿಟ್ಟೋಗ್ಬೇಡಿ ಎಂದು ಬಿಕ್ಕಿ ಬಿಕ್ಕಿ ಅತ್ತ ಮಕ್ಕಳು

ಕಲಬುರಗಿ : ಶಿಕ್ಷಕ ಹಾಗೂ ಮಕ್ಕಳ ಬಾಂಧವ್ಯ ಎಂತಹದ್ದು ಎಂಬುದಕ್ಕೆ ಈ ಘಟನೆಯೇ ನಿದರ್ಶನ. ಪ್ರೀತಿಯ ಶಿಕ್ಷಕ ವರ್ಗಾವಣೆ ಹಿನ್ನೆಲೆ ನೊಂದ ಮಕ್ಕಳು ಪ್ಲೀಸ್ ಸರ್ ಬಿಟ್ಟೋಗ್ಬೇಡಿ ಎಂದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಇಂತಹ ಮನಕಲುಕುವ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ದಿಕಸಂಗಾ ಬಿ ಗ್ರಾಮದಲ್ಲಿ ನಡೆದಿದೆ.

ಶಿಕ್ಷಕನ ಕೈಕಾಲು ಹಿಡಿದುಕೊಂಡ ಮಕ್ಕಳು ನಮ್ಮನ್ನು ಬಿಟ್ಟು ಹೋಗಬೇಡಿ ಅಂತ ಕಣ್ಣೀರು ಹಾಕಿದ್ದಾರೆ, ವಿದ್ಯಾರ್ಥಿಗಳು ಬ್ಯಾಗ್ ಹಾಕಿಕೊಂಡು ತಾವೂ ಶಿಕ್ಷಕನ ಹಿಂದೆ ನಡೆದಿದ್ದಾರೆ. ವಿದ್ಯಾರ್ಥಿಗಳ ಮತ್ತು ಗ್ರಾಮಸ್ಥರ ಪ್ರೀತಿಗೆ ಶಿಕ್ಷಕ ಕೂಡ ಭಾವುಕರಾಗಿದ್ದಾರೆ.

ಸಂಗನಬಸಯ್ಯ ಸಾಲಿಮಠ ಎನ್ನುವ ಶಿಕ್ಷಕರು ಕಳೆದ 25 ವರ್ಷಗಳಿಂದ ದಿಕಸಂಗಾ ಬಿ ಗ್ರಾಮದಲ್ಲಿ ಕೆಲಸ ಮಾಡುತ್ತಿದ್ದರು. ನಂತರ ಅವರಿಗೆ ಬೇರೊಂದು ಶಾಲೆಗೆ ವರ್ಗಾವಣೆ ಮಾಡಲಾಗಿದ್ದು, ಪ್ರೀತಿಯ ಶಿಕ್ಷಕನ ವರ್ಗಾವಣೆಯಾಗುತ್ತಿದ್ದಾರೆ ಎಂದು ನೊಂದ ಮುಗ್ದ ಮಕ್ಕಳು ಕಣ್ಣೀರು ಸುರಿಸಿದ್ದಾರೆ. ಕೊನೆಯ ದಿನದ ಕೆಲಸಕ್ಕೆ ಆಗಮಿಸಿದ್ದ ಶಿಕ್ಷಕ ಕೆಲಸ ಮುಗಿಸಿ ಹೋಗುವಾಗ ಶಿಕ್ಷಕನನ್ನು ಬಿಗಿದಪ್ಪಿಕೊಂಡು.. ಪ್ಲೀಸ್ ಸರ್ ಬಿಟ್ಟೋಗ್ಬೇಡಿ ಎಂದು ಕಣ್ಣೀರಿಟ್ಟಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read