ನಟ ದರ್ಶನ್ ಗೆ ‘ಬಳ್ಳಾರಿ ಜೈಲೂ’ ಸೇಫ್ ಅಲ್ಲ, ‘ತಿಹಾರ್ ಜೈಲಿ’ಗೆ ಶಿಫ್ಟ್ ಮಾಡಿ : ಮಾಜಿ ಖೈದಿ ಶಿಗ್ಲಿ ಬಸ್ಯಾ

ಬಳ್ಳಾರಿ : ನಟ ದರ್ಶನ್ ಗೆ ಬಳ್ಳಾರಿ ಜೈಲೂ ಸೇಫ್ ಅಲ್ಲ, ತಿಹಾರ್ ಜೈಲಿಗೆ ಶಿಫ್ಟ್ ಮಾಡಿ ಎಂದು ಮಾಜಿ ಖೈದಿ ಶಿಗ್ಲಿ ಬಸ್ಯಾ ಹೇಳಿಕೆ ನೀಡಿದ್ದಾರೆ.

ಬಳ್ಳಾರಿ ಜೈಲಿನಲ್ಲಿ ಕೂಡ ಕೆಟ್ಟ ರೌಡಿಗಳಿದ್ದಾರೆ, ಅವರ ಜೊತೆ ದರ್ಶನ್ ಸೇರಿದ್ರೆ ಅವರು ಕೆಡಬಹುದು, ಅವರನ್ನು ತಿಹಾರ್ ಜೈಲಿಗೆ ಶಿಫ್ಟ್ ಮಾಡಿದ್ರೆ ಅವರು ಬದಲಾಗಬಹುದು, ಆ ಜೈಲು ಅವರಿಗೆ ಸೇಫ್ ಎಂದರು.

1989 ರಿಂದ 2009 ರವರೆಗೆ ನಾನು ಕೂಡ ಬಳ್ಳಾರಿ ಜೈಲಿನಲ್ಲಿದ್ದೆ, ಜೈಲಿನಲ್ಲಿ ದುಡ್ಡು ಕೊಟ್ಟರೆ ಏನೂ ಬೇಕಾದರೂ ಸಿಗುತ್ತದೆ. ದರ್ಶನ್ ರನ್ನು ಬಳ್ಳಾರಿಗೆ ಶಿಫ್ಟ್ ಮಾಡಿದ್ರೆ ಏನೂ ಉಪಯೋಗ ಇಲ್ಲ. ಅವರನ್ನು ತಿಹಾರ್ ಜೈಲಿಗೆ ಶಿಫ್ಟ್ ಮಾಡಿದ್ರೆ ಅವರು ಬದಲಾಗಬಹುದು, ಅವರ ಮನಸ್ಸು ಪರಿವರ್ತನೆಯಾಗಬಹುದು ಎಂದು ಹೇಳಿದ್ದಾರೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ ನಟ ದರ್ಶನ್ ನನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಸೆಂಟ್ರಲ್ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಗೆ ರಾಜಾತಿಥ್ಯ ನೀಡಿದ್ದ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ನಟ ದರ್ಶನ್ ಹಾಗೂ ಗ್ಯಾಂಗ್ ನ ಆರೋಪಿಗಳನ್ನು ಬೇರೆ ಬೇರೆ ಜೈಲಿಗೆ ಸ್ಥಳಾಂತರಿಸಲಾಗಿದೆ. ಇಂದು ಬೆಳಿಗ್ಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ನಟ ದರ್ಶನ್ ನನ್ನು ಪೊಲೀಸ್ ಭದ್ರತೆಯಲ್ಲಿ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಯಿತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read