BIG NEWS: ಬೆಳಗಾವಿ ವಿಧಾನಮಂಡಲ ಚಳಿಗಾಲದ ಅಧಿವೇಶನಕ್ಕೆ ತೆರೆ

ಬೆಳಗಾವಿ: ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದಿದ್ದ ವಿಧಾನಮಂಡಲ ಚಳಿಗಾಲದ ಅಧಿವೇಶನ ಮುಕ್ತಾಯಗೊಂಡಿದ್ದು, ಉಭಯ ಸದನಗಳ ಕಲಾಪವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಲಾಗಿದೆ.

ಡಿಸೆಂಬರ್ 4ರಿಂದ ಆರಂಭವಾಗಿದ್ದ ಬೆಳಗಾವಿ ಅಧಿವೇಶನಕ್ಕೆ ಇಂದು ತೆರೆ ಬಿದ್ದಿದೆ. ಅಧಿವೇಶದ ಬಳಿಕ ಸುದ್ದಿಗೋಷ್ಠಿಯಲ್ಲಿ ಮತನಾಡಿದ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್, ಈ ಬಾರಿ ಅಧಿವೇಶನದಲ್ಲಿ ದೀರ್ಘಾವಧಿ ಚರ್ಚೆಯಾಗಿದ್ದು, 17 ಬಿಲ್ ಗಳನ್ನು ಅಂಗೀಕರಿಸಲಾಗಿದೆ. 150 ಗಮನ ಸೆಳೆಯುವ ಸೂಚನೆ ಚರ್ಚೆಯಾಗಿದ್ದು ಸಂತಸ ತಂದಿದೆ ಎಂದರು.

ಉತ್ತರ ಕರ್ನಾಟಕ ಅಭಿವೃದ್ದಿ ಕುರಿತು 11 ಗಂಟೆ 11 ನಿಮಿಷಗಳ ಕಾಲ ಚರ್ಚೆಯಾಗಿದೆ. ಬರಗಾಲದ ಬಗ್ಗೆ ಎರಡು ದಿನ ಚರ್ಚೆಯಾಗಿದೆ. ಮುಖ್ಯಮಂತ್ರಿಗಳು, ಕಂದಾಯ ಸಚಿವರು ಸಮರ್ಪಕ ಉತ್ತರವನ್ನೂ ನೀಡಿದ್ದಾರೆ. ಶಾಸಕರು ಕಲಾಪಕ್ಕೆ ಸರಿಯಾದ ಸಮಯಕ್ಕೆ ಬರಲ್ಲ ಎಂಬುದಿತ್ತು. ಈ ಬಾರಿ ಅದನ್ನು ತಪ್ಪಿಸಿದ್ದೇವೆ. ಈ ಭಾರಿ ಅಧಿವೇಶನದಲ್ಲಿ ದೀರ್ಘವಧಿ ಚರ್ಚೆಯಾಗಿದ್ದು, ಎಲ್ಲರೂ ಸಹಕಾರ ನೀಡಿದ್ದಾರೆ ಎಂದು ತಿಳಿಸಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read