ಕುಂದಾನಗರಿಯ ಜನರ ಬಹುದಿನಗಳ ಕನಸು ನನಸು…

ಬೆಳಗಾವಿ: ಕುಂದಾನಗರಿಯ ಜನರ ಬಹುದಿನಗಳ ಬೇಡಿಕೆ ಈಡೇರಿಕೆಯಾಗಿದೆ. ದೆಹಲಿ-ಬೆಳಗಾವಿ ಹಾಗೂ ಪುಣೆ-ಬೆಳಗಾವಿ ನಡುವೆ ವಿಮಾನ ಹಾರಾಟಕ್ಕೆ ಮುಹೂರ್ತ ಫಿಕ್ಸ್ ಆಗಿದೆ.

ಸತತ ಪ್ರಯತ್ನಗಳ ಫಲವಾಗಿ ಇಂಡಿಗೋ ಏರ್‌ಲೈನ್ಸ್ ಸಂಸ್ಥೆಯು ದೆಹಲಿ ಮತ್ತು ಬೆಳಗಾವಿ ನಡುವೆ ಅಕ್ಟೋಂಬರ್‌ 1 ರಿಂದ ಪ್ರತಿದಿನ ವಿಮಾನಯಾನ ಸಂಚಾರದ ಸೇವೆಯನ್ನು ಪ್ರಾರಂಭಿಸಲು ಸಮ್ಮತಿಸಿದೆ. ಅಕ್ಟೋಂಬರ್‌ 29 ರಿಂದ ಸ್ಟಾರ್ ಏರ್‌ಲೈನ್ಸ್ ಸಂಸ್ಥೆಯು ಪುಣೆ-ಬೆಳಗಾವಿ ನಡುವೆ ಪ್ರತಿದಿನ ವಿಮಾನಯಾನ ಸಂಚಾರ ಸೇವೆ ಆರಂಭಿಸಲಿದೆ ಎಂದು ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ.

ಅಕ್ಟೋಂಬರ್‌ 31 ರಿಂದ ಪುಣೆ-ಬೆಳಗಾವಿ ನಡುವೆ ಇಂಡಿಗೋ ಏರ್‌ಲೈನ್ಸ್ ಸಂಸ್ಥೆಯು ವಾರದಲ್ಲಿ 3 ದಿನ ಅಂದರೆ ಮಂಗಳವಾರ, ಗುರುವಾರ ಮತ್ತು ಶನಿವಾರ ವಿಮಾನಯಾನ ಸಂಚಾರ ನಡೆಸಲಿದೆ. ಬೆಳಗಾವಿಯಿಂದ ದೆಹಲಿ ಹಾಗೂ ಪುಣೆ ನಗರಗಳಿಗೆ ವಿಮಾನಯಾನ ಸೇವೆ ಆರಂಭವಾಗುತ್ತಿರಿವುದಕ್ಕೆ ಜನರು ಹಾಗೂ ಉದ್ಯಮಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read