ಬೆಳಗಾವಿ: ಬೆಳಗಾವಿ ಜಿಲ್ಲೆಯ ಸಂತಿಬಸ್ತವಾಡ ಗ್ರಾಮದಲ್ಲಿ ಕಲ ದಿನಗಲ ಹಿಂದೆ ಈದ್ಗಾ ಮಿನಾರ್ ಹಾಗೂ ಗುಂಬಜ್ ದ್ವಂಸ ಪ್ರಕರಣ ನಡೆದಿತ್ತು. ಈ ಪ್ರಕರಣ ಸಂಬಂಧ ಇದೀಗ 4 ಆರೋಪಿಗಳನ್ನು ಪೊಲಿಸರು ಬಂಧಿಸಿದ್ದಾರೆ.
ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ನಾಲ್ವರು ಆರೋಪಿಗಳ ಬಂಧಿಸಿದ್ದಾರೆ. ಬಂಧಿತರನ್ನು ಸಂತಿಬಸ್ತಿವಾಡ ಗ್ರಾಮದ ಲಕ್ಷ್ಮಣ ಉಚವಾಡೆ, ಮುತ್ತಪ್ಪ ಉಚವಾಡೆ, ಲಕ್ಷ್ಮಣ ನಾಯಕ, ಶಿವರಾಜ್ ಗುದ್ದಿ ಎಂದು ಗುರುತಿಸಲಾಗಿದೆ.
ಹಿಂದೂ ಹುಡುಗಿಯನ್ನು ಮುಸ್ಲಿಂ ಹುಡುಗ ಅಪಹರಿಸಿಕೊಂಡು ಹೋಗಿ ಮದುವೆಯಾಗಿದ್ದಕ್ಕೆ ಗಲಾಟೆ ನಡೆದು ದರ್ಗಾ ದ್ವಂಸ ಆರೋಪ ಕೇಳಿಬಂದಿತ್ತು.