BIG NEWS: ಆಸ್ಪತ್ರೆಯಲ್ಲಿಯೇ ಮಗುವನ್ನು ಬಿಟ್ಟು ಪರಾರಿಯಾಗಿದ್ದ ತಾಯಿ ಅರೆಸ್ಟ್

ಬೆಳಗಾವಿ: ಹುಟ್ಟಿದ ಶಿಶುವನ್ನು ಆಸ್ಪತ್ರೆಯಲ್ಲಿಯೇ ಬಿಟ್ಟು ಬಾಣಂತಿ ತಾಯಿ ಪರಾರಿಯಾಗದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ತಾಯಿಯನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.

ಬೇಬಿಜಾನ್ ಬಂಧಿತ ಮಹಿಳೆ. ಹುಟ್ಟಿದ ಶಿಶುವನ್ನೇ ಬೆಳಗಾವಿ ಜಿಲ್ಲಾಸ್ಪತ್ರೆ ಬಿಮ್ಸ್ ನಲ್ಲಿ ಬಿಟ್ಟು ಮಹಿಳೆ ಬೇಬಿಜಾನ್ ತನ್ನತ್ತೆಯೊಂದಿಗೆ ಪರಾರಿಯಾಗಿದ್ದಳು. ಪರಿಣಾಮ ನವಜಾತ ಶಿಶು ಸಾವನ್ನಪ್ಪಿತ್ತು. ಬೆಳಗಾವಿಯ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಪರಾರಿಯಾಗಿದ್ದ ಮಹಿಳೆಯನ್ನು ಬಂಧಿಸಲಾಗಿದ್ದು, ಮಹಿಳೆಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಕಾಲು ಜಾರಿ ಬಿದ್ದಿದ್ದ ಗರ್ಭಿಣಿ ಬೇಬಿಜಾನ್ ಬೆಳಗಾವಿಯ ಬೈಲಹೊಂಗಲದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಳು. ತೀವ್ರನೋವು ಕಾಣಿಸಿಕೊಂದ ಹಿನ್ನೆಲೆಯಲ್ಲಿ ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲು ಸೂಚಿಸಲಾಗಿತ್ತು. ಡಿಸೆಂಬರ್ 8ರಂದು ಮಧ್ಯಾಹ್ನ ತನ್ನ ಅತ್ತೆ ಜೊತೆ ಆಸ್ಪತ್ರೆಗೆ ಬಂದು ದಾಖಲಾದ ಮಹಿಳೆಗೆ ಡಿ.9ರಂದು ರಾತ್ರಿ ಹೆರಿಗೆಯಾಗಿತ್ತು. ಮಗು ಕೇವಲ 735 ಗ್ರಾಂ ತೂಕವಿತ್ತು. ತೂಕ ಕಡಿಮೆ ಇದ್ದ ಕರಣಕ್ಕೆ ಎನ್ ಐಸಿಯುಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಶಿಶುವನ್ನು ಆರೈಕೆ ಮಾಡಬೇಕಿದ್ದ ತಾಯಿ ಬೇಬಿಜಾನ್ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಳು.

ಮಹಿಳೆ ತನ್ನ ಅತ್ತೆ ಜೊತೆ ಆಸ್ಪತ್ರೆಯಿಂದ ಪರಾರಿಯಾಗುತ್ತಿರುವ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿತ್ತು. ತೂಕ ಕಡಿಮೆ, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ನವಜಾತ ಶಿಶುವನ್ನು ವೆಂಟಿಲೇಟರ್ ನಲ್ಲಿಟ್ಟು ಚಿಕಿತ್ಸೆ ಮುಂದುವರೆಸಲಾಗಿತ್ತು. ಆದರೆ ಮಗು ಡಿ.14ರದು ಮೃತಪಟ್ಟಿತ್ತು.

ನವಜಾತ ಶಿಶುವನ್ನು ಬಿಟ್ಟು ಪರಾರಿಯಾಗಿರುವ ತಾಯಿ ಬೇಬಿಜಾನ್ ಳನ್ನು ಎಪಿಎಂಸಿ ಠಾಣೆ ಪೊಲಿಸರು ಬಂಧಿಸಿ ವಿಚಾರಣೆ ನಡೆಸಿದ್ದು, ಈ ವೇಳೆ ಬಾಣಂತಿ, ಮಗು ಗರ್ಭದಲ್ಲಿ ಅಡ್ಡವಾಗಿ ಮಲಗಿದ್ದ ಕಾರಣಕ್ಕೆ ಇದರಿಂದ ಕುಟುಂಬಕ್ಕೆ ಕೇಡಾಗುತ್ತೆ ಎಂದು ಬಾಣಮ್ತಿಯಾದ ಬಳಿಕ ಮಗುವನ್ನು ಆಸ್ಪತ್ರೆಯಲ್ಲಿಯೇ ಬಿಟ್ಟು ಪರಾರಿಯಾಗಿದ್ದಾಗಿ ಬಾಯ್ಬಿಟ್ಟಿದ್ದಾಳೆ ಎಂದು ತಿಳಿದುಬಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read