ಬೆಳಗಾವಿ: ಪತ್ನಿಯಿದ್ದರೂ ಪರಸ್ತ್ರೀ ಸಹವಾಸ ಮಾಡಿದ್ದ ಪತಿ ಮಹಾಶಯನೊಬ್ಬ ಲಾಡ್ಜ್ ರೂಂ ನಲ್ಲಿ ಮಹಿಳೆಯೊಂದಿಗೆ ಏಕಾಂತದಲ್ಲಿದ್ದಾಗಲೇ ಪತ್ನಿ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಲಾಡ್ಜ್ ಒಂದರಲ್ಲಿ ಈ ಘಟನೆ ನಡೆದಿದೆ. ಅವಿನಾಶ್ ಭೋಸಲೆ ಎಂಬಾತ ಲಾಡ್ಜ್ ನಲ್ಲಿ ಪರಸ್ತ್ರೀಯೊಂದಿಗೆ ವಾಸವಾಗಿದ್ದ. ವಿಷಯ ತಿಳಿದ ಅವಿನಾಶ್ ಪತ್ನಿ ತನ್ನ ಮಾವ ಜೊತೆಗೆ ನೇರವಾಗಿ ಲಾಡ್ಜ್ ಗೆ ಎಂಟ್ರಿಕೊಟ್ಟಿದ್ದಾಳೆ.
ಮತ್ತೋರ್ವ ಹೆಣ್ಣಿನೊಂದಿಗಿದ್ದ ಪತಿಯನ್ನು ಕಂಡು ಪತ್ನಿ ರೌದ್ರಾವತಾರ ತಾಳಿದ್ದಾಳೆ. ಮಗನ ಪರಸ್ತ್ರೀ ಸಹವಾಸ ಕಣ್ಣಾರೆ ಕಂಡ ತಂದೆ ಕೂಡ ಶಾಕ್ ಆಗಿದ್ದಾರೆ. ಪತಿಯನ್ನು ಲಾಡ್ಜ್ ರೂಮ್ ನಿಂದ ಧರಧರನೆ ರಸ್ತೆಗೆ ಎಳೆದು ತಂದ ಪತ್ನಿ ಚಪ್ಪಲಿಯಿಂದ ಹಿಗ್ಗಾ ಮುಗ್ಗಾ ಥಳಿಸಿದ್ದಾಳೆ. ಮಗನ ಚಪಲ ಕಂಡು ನೊಂದ ತಂದೆ ಕೂಡ ಮಗನಿಗೆ ಕಪಾಳಕ್ಕೆ ಭಾರಿಸಿದ್ದಾರೆ.
ಚಿಕ್ಕೋಡಿ ಪಟ್ಟಣದ ಬಸ್ ನಿಲ್ದಾಣ ಬಳಿ ಈ ಘಟನೆ ನಡೆದಿದ್ದು, ಸಾರ್ವಜನಿಕರು ರಸ್ತೆಯಲ್ಲಿ ನಿಂತು ನೋಡುತ್ತಿದ್ದರೂ ಪತ್ನಿ ಮಾತ್ರ ಪತ್ನಿಗೆ ಹೊಡೆಯುವುದನ್ನು ನಿಲ್ಲಿಸಿಲ್ಲ. ಪರಸ್ತ್ರೀ ಸಹವಾಸ ಮಾಡಿದ ಪತಿಗೆ ತಕ್ಕ ಶಾಸ್ತಿ ಮಾಡಿದ್ದಾಳೆ.
