ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯದ ವೇಳೆ ಬೌಂಡರಿ ಲೈನ್ ಬಳಿ ಫೀಲ್ಡಿಂಗ್ ಮಾಡುತ್ತಿದ್ದ ಕರ್ನಾಟಕದ ಬೆಳಗಾವಿ ಹುಡುಗ ಹಿಡಿದಿರುವ ಕ್ಯಾಚ್ ಒಂದು ಈಗ ಕ್ರಿಕೆಟ್ ದಿಗ್ಗಜರನ್ನ ನಿಬ್ಬೆರಗಾಗಿಸಿದೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಸೇರಿದಂತೆ ಹಲವರು ಈ ಕ್ಯಾಚ್ ನ ವಿಡಿಯೋ ಶೇರ್ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.
ಮೂರು ದಿನಗಳ ಹಿಂದೆ ಬೆಳಗಾವಿ ನಗರದ ವ್ಯಾಕ್ಸಿನ್ ಡಿಪೋ ಆವರಣದಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿದ್ದ ವೇಳೆ ಕಿರಣ್ ತರಳೇಕರ್ ಎಂಬ ಈ ಯುವಕ ಬೌಂಡರಿ ಲೈನ್ ಬಳಿ ಫೀಲ್ಡಿಂಗ್ ಮಾಡುತ್ತಿದ್ದರು. ಆಗ ಎದುರಾಳಿ ತಂಡದ ಆಟಗಾರ ಸಿಕ್ಸ್ ಹೊಡೆಯಲು ಪ್ರಯತ್ನಿಸಿದ್ದಾರೆ.
ಈ ಸಂದರ್ಭದಲ್ಲಿ ಕಿರಣ್ ಹಾರಿ ಕ್ಯಾಚ್ ಹಿಡಿದಿದ್ದಾರೆ. ಆದರೆ ತಾವು ಬೌಂಡರಿ ಲೈನ್ ದಾಟುವುದನ್ನು ಗಮನಿಸಿದ ಅವರು ಚೆಂಡನ್ನು ಮೇಲೆ ಎಸೆದಿದ್ದಾರೆ. ಅಷ್ಟೇ ಅಲ್ಲ ಬೌಂಡರಿ ಲೈನ್ ನಿಂದ ಆಚೆಗೆ ಇದ್ದ ಕಾರಣ ಕೆಳಗೆ ಬಂದ ಚೆಂಡನ್ನು ಕಾಲಿನಿಂದ ಫುಟ್ಬಾಲ್ ರೀತಿಯಲ್ಲಿ ಒದ್ದಿದ್ದು, ಮತ್ತೊಬ್ಬ ಆಟಗಾರ ಅದನ್ನು ಕ್ಯಾಚ್ ಹಿಡಿದಿದ್ದಾರೆ.
ಇದರ ವಿಡಿಯೋವನ್ನು ಶೇರ್ ಮಾಡಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ಫುಟ್ಬಾಲ್ ಆಡಲು ಗೊತ್ತಿರುವ ವ್ಯಕ್ತಿಯನ್ನು ಕ್ರಿಕೆಟ್ ಗೆ ಕರೆ ತಂದಾಗ ಹೀಗೆ ಆಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ. ಹಾಗೆಯೇ ಮತ್ತೊಬ್ಬ ಮಾಜಿ ಆಟಗಾರ ಮೈಕಲ್ ವಾನ್, ಇದು ಸಾರ್ವಕಾಲಿಕ ಶ್ರೇಷ್ಠ ಕ್ಯಾಚ್ ಎಂದು ಬಣ್ಣಿಸಿದ್ದಾರೆ. ಇನ್ನೂ ಹಲವು ಖ್ಯಾತನಾಮರು ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ.
https://twitter.com/sachin_rt/status/1624684565733445634?ref_src=twsrc%5Etfw%7Ctwcamp%5Etweetembed%7Ctwterm%5E1624684565733445634%7Ctwgr%5E8a94119474c5ee4e0124ca96ed96acdfe96724c7%7Ctwcon%5Es1_&ref_url=https%3A%2F%2Ftv9kannada.com%2Fsports%2Fcricket-news%2Fbelagavi-tennis-ball-cricketer-boundary-line-catch-that-caught-sachin-tendulkars-eye-see-video-kannada-news-psr-au14-519300.html
https://twitter.com/MichaelVaughan/status/1624698969707233280?ref_src=twsrc%5Etfw%7Ctwcamp%5Etweetembed%7Ctwterm%5E1624698969707233280%7Ctwgr%5E8a94119474c5ee4e0124ca96ed96acdfe96724c7%7Ctwcon%5Es1_&ref_url=https%3A%2F%2Ftv9kannada.com%2Fsports%2Fcricket-news%2Fbelagavi-tennis-ball-cricketer-boundary-line-catch-that-caught-sachin-tendulkars-eye-see-video-kannada-news-psr-au14-519300.html
https://twitter.com/JimmyNeesh/status/1624687507626500096?ref_src=twsrc%5Etfw%7Ctwcamp%5Etweetembed%7Ctwterm%5E1624687507626500096%7Ctwgr%5E8a94119474c5ee4e0124ca96ed96acdfe96724c7%7Ctwcon%5Es1_&ref_url=https%3A%2F%2Ftv9kannada.com%2Fsports%2Fcricket-news%2Fbelagavi-tennis-ball-cricketer-boundary-line-catch-that-caught-sachin-tendulkars-eye-see-video-kannada-news-psr-au14-519300.html