ಬೆಳಗಾವಿ: ಮಚ್ಚು ಹಿಡಿದು ರೀಲ್ಸ್ ಮಾಡಿದ್ದ ಪುಂಡನನ್ನು ಬೆಳಗಾವಿಯ ನೇಸರಗಿ ಪೊಲೀಸರು ಬಂಧಿಸಿದ್ದಾರೆ.
ಮೇಕಲಮರಡಿ ಗ್ರಾಮದ ಮುಶ್ರಫ್ ಖಾನ್ ಬಂಧಿತ ಆರೋಪಿ. ಏರಿಯಾದಲ್ಲಿ ಹವಾ ಕ್ರಿಯೇಟ್ ಮಾಡಲು ಆರೋಪಿ ಮಚ್ಚು ಹಿಡಿದು, ಡೈಲಾಗ್ ಹೊಡೆದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿಬಿಟ್ಟಿದ್ದನಂತೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಅಲ್ಲದೇ ರೀಲ್ಸ್ ಗಾಗಿ ಯಾವುದೇ ಆಯುಧಗಳನ್ನು ಪ್ರದರ್ಶಿಸಿ ಕಾನೂನು ಶಿಕ್ಷೆಗೆ ಒಳಗಾಗಬೇಡಿ ಎಂದು ಸಾರ್ವಜನಿಕರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.