ಬೆಳಗಾವಿ: ಭಾರಿ ಮಳೆ ಹಿನ್ನೆಲೆಯಲ್ಲಿ ಮೀನುಗಾರಿಕೆಗೆ ನಿರ್ಬಂಧ ವಿಧಿಸಿದ್ದರೂ ನಿರ್ಲಕ್ಷಿಸಿ ಮೀನು ಹಿಡಿಯಲು ಹೋಗಿ ವ್ಯಜ್ತಿ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಯಮಕನಮರಡಿಯಲ್ಲಿ ನಡೆದಿದೆ.
ಕಲ್ಲಪ್ಪ ಮಾರುತಿ ಬರಗಾಲಿ (45) ಮೃತ ದುರ್ದೈವಿ. ಹಿಡಕಲ್ ಜಲಾಶಯದ ಹಿನ್ನೀರಿನಲ್ಲಿ ಮೀನು ಹಿಡಿಯಲು ಹೋಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ದೌಡಾಯಿಸಿ ಮೃತದೇಹವನ್ನು ಹೊರತೆಗೆದಿದ್ದಾರೆ.
ಯಮಕನಮರಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಭಾರಿ ಮಳೆ ಹಿನ್ನೆಲೆಯಲ್ಲಿ ನದಿ ಹಾಗೂ ಜಲಾಶಯಗಳ ಸುತ್ತಮುತ್ತ ಕಟ್ಟೆಚ್ಚರ ಘೋಷಿಸಲಾಗಿದೆ. ಅಲ್ಲದೇ ಜಲಾಶಯ, ನದಿ ತೀರಗಳಿಗೆ ಯಾರೂ ತೆರಳದಂತೆ, ಮೀನುಗಾರಿಕೆಗೆ ಹೋಗದಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಎಚ್ಚರಿಕೆ ನಡುವೆಯೂ ಮೀನು ಹಿಡಿಯಲು ಹೋಗಿ ಕಲ್ಲಪ್ಪ ದುರಂತ ಅಂತ್ಯ ಕಂಡಿದ್ದಾರೆ.