BIG NEWS: ಸಿದ್ದರಾಮಯ್ಯನವರೇ 5 ವರ್ಷ ಸಿಎಂ: ಪ್ರತಿಷ್ಠೆಗಾಗಿ ಕೆಲವರಿಂದ ಗೊಂದಲದ ಹೇಳಿಕೆಗಳು ಸರಿಯಲ್ಲ: ಸಚಿವ ದಿನೇಶ್ ಗುಂಡೂರಾವ್

ಬೆಳಗಾವಿ: ರಾಜ್ಯ ಕಾಂಗ್ರೆಸ್ ನಲ್ಲಿ ಯಾವುದೇ ಬಣಗಳಿಲ್ಲ. ಕೆಲವರು ಪ್ರತಿಷ್ಠೆಗಾಗಿ ಬಹಿರಂಗವಾಗಿ ಹೇಳಿಕೆಗಳನ್ನು ಕೊಡುವುದು ಸರಿಯಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ಸಿಎಂ ಬದಲಾವಣೆ ಚರ್ಚೆ ವಿಚಾರವಾಗಿ ಮಾತನಾಡುತ್ತ, ಇಂತಹ ಚರ್ಚೆಯೇ ಅಪ್ರಸ್ತುತ. 5 ವರ್ಷಗಳ ಕಾಲ ಸಿದ್ದರಾಮಯ್ಯನವರೇ ಸಿಎಂ ಆಗಿ ಇರುತ್ತಾರೆ. ಅನಗತ್ಯವಾಗಿ ಚರ್ಚೆಗಳಿಗೆ ಅವಕಾಶವಿಲ್ಲ ಎಂದರು.

ಕೆಲವರು ಪ್ರತಿಷ್ಠೆಗಾಗಿ ಬಹಿರಂಗ ಹೇಳಿಕೆಗಳನ್ನು ಕೊಡುವುದು ಕೂಡ ಸರಿಯಲ್ಲ. ಸಿಎಂ ಆಗಬೇಕು, ಸಚಿವರಾಗಬೇಕು ಎಂದು ರಾಜಕೀಯ ಕ್ಷೇತ್ರದಲ್ಲಿ ಆಸೆ ಎಲ್ಲರಿಗೂ ಇದ್ದೇ ಇರುತ್ತದೆ. ಆದರೆ ಎಲ್ಲವೂ ಇತಿಮಿತಿಯಲ್ಲಿ ಇರಬೇಕು. 30 ಜನರು ಸಚಿವರಾಗಬಹುದು. ಆದರೆ ಸಿಎಂ ಹುದ್ದೆ ಎಂಬುದು ಒಬ್ಬರಿಗೆ ಮಾತ್ರ ಇರುತ್ತದೆ. ಅದು ಎಲ್ಲರಿಗೂ ಸುಗುವಂತದ್ದಲ್ಲ. ಇದನ್ನೆಲ್ಲ ಪದೇ ಪದೇ ಚರ್ಚೆ ಮಾಡುತ್ತಿರುವ ವಿಚಾರವೂ ಅಲ್ಲ. ಸಿಎಂ ಬದಲಾವಣೆಯ ಚರ್ಚೆ ಆಗಬಾರದು ಎಂದು ಹೇಳಿದರು.

ಕಾಂಗ್ರೆಸ್ ನಲ್ಲಿ ಯಾವುದೇ ಬಣಗಳಿಲ್ಲ. ಶಾಸಕರು, ಕಾರ್ಯಕರ್ತರ ನಡುವೆ ಉತ್ತಮ ವಾತಾವರಣಗಳಿವೆ. ಕೆಲವರು ಬಹಿರಂಗ ಹೇಳಿಕೆಗಳನ್ನು ಕೊಡುವ ಕೆಲಸ ನಿಲ್ಲಿಸಬೇಕು ಪಕ್ಷದ ಉದ್ದೇಶ, ಅಭಿವೃದ್ಧಿ ಕೆಲಸಗಳತ್ತ ಗಮನ ಹರಿಸಬೇಕು ಎಂದು ಹೇಳಿದರು.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read