ಬೆಳಗಾವಿ: ಕ್ಷುಲ್ಲಕ ಕಾರಣಕ್ಕೆ ಅಣ್ಣನೇ ತಮ್ಮನನ್ನು ಹತ್ಯೆಗೈದ ಘಟನೆ ಬೆಳಗಾವಿ ತಾಲೂಕಿನ ಎಸ್.ಧಾವಣೆ ಗ್ರಾಮದಲ್ಲಿ ನಡೆದಿದೆ.
ಮಾರಕಾಸ್ತ್ರಗಳಿಂದ ಕೊಚ್ಚಿ ಲಕ್ಷ್ಮಣ್ ಬರಮಾ ಬಾಳೇಕುಂದ್ರಿ (28)ಯನ್ನು ಅಣ್ಣ ಮಾಅರುತಿ ಹತ್ಯೆ ಮಾಡಿದ್ದಾನೆ. ಸದ್ಯ ಕೊಲೆ ಮಾಡಿರುವ ಆರೋಪಿ ಅಣ್ಣನನ್ನು ಪೊಲೀಸರು ಬಂಧಿಸಿದ್ದಾರೆ.
ತಂದೆ ಇಲ್ಲದೇ ತಾಯಿ ಆರೈಕೆಯಲ್ಲಿ ಬೆಳೆದಿದ್ದ ಅಣ್ಣ-ತಮ್ಮ ಇಬ್ಬರೂ, ಕಷ್ಟಪಟ್ಟು ದುಡಿದು ಹೊಸ ಮನೆ ಕಟ್ಟಿಸಿದ್ದರು. ಮನೆ ಕಟ್ಟಿದ ಬಳಿಕ ಮದುವೆ ಮಾಡಿಕೊಳ್ಳು ಪ್ಲಾನ್ ನಲ್ಲಿದ್ದರು. ಆದರೆ ತಮ್ಮ ಲಕ್ಷ್ಮಣ್ ಕುಡಿತದ ದಾಸನಾಗಿದ್ದ. ಇಬ್ಬರ ನಡುವೆ ಜಗಳವಾಗಿ ಅಣ್ಣ ಮಾರುತಿ, ತಮ್ಮ ಲಕ್ಷ್ಮಣ್ ನನ್ನು ಕೊಂದೇ ಬಿಟ್ಟಿದ್ದಾನೆ. ಎರಡು ದಿನಗಳ ಹಿಂದೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.