ಆಗಸದಿಂದ ಹುಳುಗಳು ಬೀಳುತ್ತಿವೆ ಎನಿಸುವಂತೆ ಹಾದಿ ಬೀದಿಗಳಲ್ಲೆಲ್ಲಾ ಹುಳುಗಳು ಕಾಣಿಸಿಕೊಳ್ಳುತ್ತಿರುವ ವಿಚಿತ್ರ ಘಟನೆಯೊಂದು ಚೀನಾದ ಬೀಜಿಂಗ್‌ನಲ್ಲಿ ಜರುಗಿದೆ.
ಹುಳುಗಳ ರೀತಿಯ ಜೀವಿಗಳಿಂದ ಭರಿತವಾದ ಕಾರುಗಳ ವಿಡಿಯೋವೊಂದು ವೈರಲ್ ಆಗಿದೆ. ಹುಳುಗಳ ಈ ಮಳೆಯಿಂದ ರಕ್ಷಿಸಿಕೊಳ್ಳಲು ಅಲ್ಲಿನ ಜನರೀಗ ಛತ್ರಿಗಳನ್ನು ಹಿಡಿದು ಓಡಾಡಲಿದ್ದಾರೆ ಎಂದು ಕೆಲ ವರದಿಗಳು ತಿಳಿಸಿವೆ.
ಈ ವಿಚಿತ್ರ ಬೆಳವಣಿಗೆ ಹಿಂದಿನ ಕಾರಣಗಳೇನೆಂದು ಅಧಿಕೃತವಾಗಿ ತಿಳಿದುಬಂದಿಲ್ಲ. ಆದರೆ ಆನ್ಲೈನ್‌ನಲ್ಲಿ ವೈರಲ್ ಆಗಿರುವ ಈ ಘಟನೆ ಸಂಬಂಧ ಚಿತ್ರವಿಚಿತ್ರ ಊಹಾಪೋಹಗಳು ಹರಿದಾಡುತ್ತಿವೆ.
ಬಲವಾದ ಗಾಳಿ ಅಥವಾ ಸುಂಟರಗಾಳಿ ಪ್ರಭಾವದಿಂದಾಗಿ ದೂರದಲ್ಲೆಲ್ಲೋ ಇರುವ ಹುಳುಗಳ ಗುಚ್ಛಗಳು ಹೀಗೆ ಚೆಲ್ಲಾಪಿಲ್ಲಿಯಾಗಿ ಮತ್ತೆಲ್ಲೂ ಹೋಗಿ ಉದುರಬಹುದು ಎಂದು ’ದಿ ಸೈಂಟಿಫಿಕ್ ಜರ್ನಲ್ ಆಫ್ ದಿ ಮದರ್ ನೇಚರ್ ನೆಟ್ವರ್ಕ್’ ಪತ್ರಿಕೆ ವರದಿ ಮಾಡಿದೆ.
https://twitter.com/TheRioTimes/status/1633418516685639681?ref_src=twsrc%5Etfw%7Ctwcamp%5Etweetembed%7Ctwterm%5E1633418516685639681%7Ctwgr%5E8578f8d9513689dd7ffadf842793033d41a027c4%7Ctwcon%5Es1_&ref_url=https%3A%2F%2Fwww.india.com%2Fviral%2Fbeijing-rain-of-worms-viral-video-residents-asked-to-carry-umbrellas-to-street-watch-worm-like-objects-fall-from-sky-china-5936220%2F