ಮಲೇಷ್ಯಾದಲ್ಲಿ ವಿಚಿತ್ರ ಘಟನೆ; ಸಿಗರೇಟ್ ವಿಚಾರಕ್ಕೆ ಹಲ್ಲೆ, ದೃಶ್ಯಾವಳಿಗಳು ವೈರಲ್ !

ಕೌಲಾಲಂಪುರ: ಮಲೇಷ್ಯಾದ ಒಂದು ಹೋಟೆಲಿನಲ್ಲಿ ನಡೆದ ವಿಚಿತ್ರ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಅಲ್ಲಿ ವೃದ್ಧ ಮಹಿಳೆಯೊಬ್ಬರು ವ್ಯಕ್ತಿಯೊಬ್ಬರಿಗೆ ಸಿಗರೇಟ್ ಕೇಳಿದ್ದಾರೆ. ಆದರೆ ಆ ವ್ಯಕ್ತಿ ಅದನ್ನು ನಿರಾಕರಿಸಿದ್ದಕ್ಕೆ ಆ ಮಹಿಳೆ ಕೋಪಗೊಂಡು ಆತನ ಬೆನ್ನಿಗೆ ಸತತವಾಗಿ ಹೊಡೆದಿದ್ದಾರೆ. ಈ ಘಟನೆಯನ್ನು ಟಿಕ್‌ಟಾಕ್ ಬಳಕೆದಾರರೊಬ್ಬರು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ.

ವರದಿಗಳ ಪ್ರಕಾರ, ಆ ವ್ಯಕ್ತಿ ತನ್ನ ಸ್ನೇಹಿತರೊಂದಿಗೆ ಹೋಟೆಲಿನಲ್ಲಿ ಊಟ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ. ಮಹಿಳೆ ಅವರ ಬಳಿ ಬಂದು ಕೈ ಚಾಚಿ ಏನನ್ನೋ ಕೇಳಿದ್ದಾರೆ. ಸಿಗರೇಟ್ ಕೇಳುತ್ತಿದ್ದಾರೆಂದು ತಿಳಿದ ಆ ವ್ಯಕ್ತಿ, ಆಕೆಯ ಆರೋಗ್ಯದ ಕಾಳಜಿಯಿಂದ ಸಿಗರೇಟ್ ನೀಡಲು ನಿರಾಕರಿಸಿದ್ದಾರೆ. ಅಷ್ಟೇ ಅಲ್ಲದೆ, ಬೇರೆ ಟೇಬಲ್‌ನವರನ್ನು ಕೇಳುವಂತೆ ವಿನಂತಿಸಿದ್ದಾರೆ. ಇದರಿಂದ ಕೋಪಗೊಂಡ ಆ ಮಹಿಳೆ, ಏಕಾಏಕಿ ಆ ವ್ಯಕ್ತಿಯ ಬೆನ್ನಿಗೆ ಬಾರಿಸಿ ಅಲ್ಲಿಂದ ಹೊರಟು ಹೋಗಿದ್ದಾರೆ.

ಆದರೆ ಅಚ್ಚರಿಯ ವಿಷಯ ಅಂದ್ರೆ, ಇಷ್ಟೆಲ್ಲಾ ನಡೆದರೂ ಆ ವ್ಯಕ್ತಿ ಮಾತ್ರ ಶಾಂತವಾಗಿಯೇ ಇದ್ದರು. ಅವರು ಆ ಮಹಿಳೆಗೆ ಯಾವುದೇ ಪ್ರತೀಕಾರವನ್ನೂ ಮಾಡಲಿಲ್ಲ. ಈ ವಿಡಿಯೋ ನೋಡಿದ ನೆಟ್ಟಿಗರು ಆ ವ್ಯಕ್ತಿಯ ತಾಳ್ಮೆ ಮತ್ತು ಸಂಯಮವನ್ನು ಕೊಂಡಾಡಿದ್ದಾರೆ.

ಇನ್ನು ಕೆಲವರು ಆ ಮಹಿಳೆಯ ವರ್ತನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಆಕೆಗೆ ಮಾನಸಿಕ ಆರೋಗ್ಯ ಸಮಸ್ಯೆಗಳಿರಬಹುದೆಂದು ಅನುಮಾನಿಸಿದ್ದಾರೆ. ಮತ್ತೆ ಕೆಲವರು ಬಡತನ ಮತ್ತು ದುರ್ಬಲ ಜನರಿಗೆ ಸೂಕ್ತ ಬೆಂಬಲದ ಕೊರತೆಯಂತಹ ಸಾಮಾಜಿಕ ಸಮಸ್ಯೆಗಳ ಬಗ್ಗೆ ಗಮನ ಹರಿಸಿದ್ದಾರೆ. ಒಟ್ಟಿನಲ್ಲಿ, ಈ ಘಟನೆ ಮಲೇಷ್ಯಾದಲ್ಲಿ ನಡೆದ ಒಂದು ಅಸಾಮಾನ್ಯ ಘಟನೆಯಾಗಿದ್ದು, ವ್ಯಕ್ತಿಯ ಶಾಂತ ಸ್ವಭಾವಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read