ಮದ್ಯ ಪ್ರಿಯರಿಗೆ ಶಾಕಿಂಗ್ ನ್ಯೂಸ್: ಇಂದಿನಿಂದ ಬಿಯರ್ ದರ 12 ರೂ.ವರೆಗೆ ಹೆಚ್ಚಳ

ಬೆಂಗಳೂರು: ಇಂದಿನಿಂದ ಬಿಯರ್ ದರ ದುಬಾರಿಯಾಗಲಿದೆ. ಪ್ರತಿ ಬಾಟಲಿಗೆ 5 ರೂ. ನಿಂದ 12 ರೂಪಾಯಿವರೆಗೆ ಬಿಯರ್ ದರ ಹೆಚ್ಚಳವಾಗಿದೆ. ಸರ್ಕಾರ ಬಿಯರ್ ಮೇಲಿನ ಅಬಕಾರಿ ಸುಂಕವನ್ನು ಶೇಕಡ 185 ರಿಂದ 195ಕ್ಕೆ ಹೆಚ್ಚಳ ಮಾಡಿದೆ. ಈ ಹಿನ್ನೆಲೆಯಲ್ಲಿ ಬಿಯರ್ ಬೆಲೆ ಏರಿಕೆಯಾಗಲಿದೆ.

ಅಬಕಾರಿ ಇಲಾಖೆ ಮೊದಲಿಗೆ ಸುಂಕ ಹೆಚ್ಚಳ ಕುರಿತಾಗಿ ಕರಡು ಪ್ರಕಟಿಸಿದ್ದು, ನಂತರ ಸಲ್ಲಿಕೆಯಾದ ಆಕ್ಷೇಪಣೆ ಪರಿಗಣಿಸಿ ಸುಂಕ ಏರಿಕೆಯ ಕುರಿತು ಬುಧವಾರ ಅಂತಿಮ ಆದೇಶ ಹೊರಡಿಸಿದೆ. ರಾಜ್ಯದಲ್ಲಿ ಬಿಯರ್ ದರ ಹೆಚ್ಚಳವಾಗುತ್ತಿರುವುದು ಕಳೆದ 7 ತಿಂಗಳ ಅವಧಿಯಲ್ಲಿ ಮೂರನೇ ಬಾರಿ ಆಗಿದೆ. ಮದ್ಯ ಪ್ರಿಯರಿಗೆ ಮತ್ತೆ ಬೆಲೆ ಏರಿಕೆ ಬಿಸಿ ತಟ್ಟಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read