ಅತೀಕ್ ಅಹ್ಮದ್ ಬೆಂಬಲಿಸಿ ಬ್ಯಾನರ್ ಹಾಕಿದ್ದವರ ಕೈಗೆ ಬಿತ್ತು ಕೋಳ

ಗ್ಯಾಂಗ್ ಸ್ಟರ್ ರಾಜಕಾರಣಿ ಅತೀಕ್ ಅಹ್ಮದ್ ಮತ್ತು ಅವರ ಸಹೋದರ ಅಶ್ರಫ್ ಅಹ್ಮದ್ ಅವರನ್ನು ಬೆಂಬಲಿಸಿ ಬ್ಯಾನರ್ ಹಾಕಿದ್ದವರನ್ನ ಬಂಧಿಸಲಾಗಿದೆ.

ಮಹಾರಾಷ್ಟ್ರದ ಬೀಡ್‌ನಲ್ಲಿರುವ ಮಜಲ್‌ಗಾಂವ್‌ನಲ್ಲಿ ಮೃತ ಗ್ಯಾಂಗ್ ಸ್ಟರ್ ಸಹೋದರರನ್ನು ಬೆಂಬಲಿಸಿ ಬ್ಯಾನರ್‌ಗಳನ್ನು ಹಾಕಲಾಗಿತ್ತು. ಬ್ಯಾನರ್ ನಲ್ಲಿ ಅವರನ್ನು ಹುತಾತ್ಮರು ಎಂಬಂತೆ ಬಿಂಬಿಸಲಾಗಿತ್ತು.

ಅತೀಕ್ ಅಹ್ಮದ್ ಮತ್ತು ಆತನ ಸಹೋದರ ಅಶ್ರಫ್ ಅಹ್ಮದ್ ಬೆಂಬಲಕ್ಕೆ ಹಾಕಲಾಗಿದ್ದ ಬ್ಯಾನರ್‌ಗಳ ಬಗ್ಗೆ ಮಾಹಿತಿ ಪಡೆದ ಪೊಲೀಸರು ತಕ್ಷಣ ಅವುಗಳನ್ನು ತೆಗೆದುಹಾಕಿದ್ದಾರೆ. ಪೊಲೀಸರ ಪ್ರಕಾರ ಬ್ಯಾನರ್‌ಗಳನ್ನು ಮೊಹ್ಸಿನ್ ಭಯ್ಯಾ ಮಿತ್ರ ಮಂಡಲ್ ಹಾಕಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದ್ದು, ಪೊಲೀಸರು ಮೊಹ್ಸಿನ್ ಪಟೇಲ್‌ಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಮಹಾರಾಷ್ಟ್ರ ಅಥವಾ ಬೀಡ್ ನೊಂದಿಗೆ ಮೃತರ ನೇರ ಸಂಪರ್ಕವಿಲ್ಲದಿದ್ದರೂ ಮಜಲಗಾಂವ್‌ನ ಯುವಕರ ಗುಂಪು ಈ ಬ್ಯಾನರ್‌ಗಳನ್ನು ಪ್ರದರ್ಶಿಸುವ ಮೂಲಕ ಉದ್ವಿಗ್ನತೆಯನ್ನು ಉಂಟುಮಾಡಲು ಪ್ರಯತ್ನಿಸಿತ್ತು.

ಉತ್ತರಪ್ರದೇಶದ ಪ್ರಯಾಗರಾಜ್‌ನಲ್ಲಿ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯುತ್ತಿದ್ದ ವೇಳೆ ಅತೀಕ್ ಅಹ್ಮದ್ ಮತ್ತು ಅವನ ಸೋದರನನ್ನ ಮೂವರು ಪತ್ರಕರ್ತರ ಸೋಗಿನಲ್ಲಿ ಬಂದು ಹತ್ಯೆ ಮಾಡಿದ್ದರು. ಈ ಘಟನೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೆಲವರು ಬೆಂಬಲಿಸಿದರೆ ಇನ್ನು ಕೆಲವರು ವಿರೋಧಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read