ಅನ್ಯ ಕೋಮಿನ ಯುವತಿ ಜೊತೆ ಹೋಗಿದ್ದಕ್ಕೆ ಥಳಿತ; ಗಾಯಾಳು ಭೇಟಿ ಮಾಡಿದ ಬಿಜೆಪಿ ಶಾಸಕ

ಶಿವಮೊಗ್ಗ: ನಿನ್ನೆ ಸಂಜೆ ಇಲಿಯಾಸ್ ನಗರದಲ್ಲಿ ತನ್ನ ಸಹೋದ್ಯೋಗಿಯ ಜೊತೆ ಕೆಲಸದಲ್ಲಿದ್ದಾಗ ಮುಸ್ಲಿಂ ಪುಂಡರಿಂದ ಮಾರಣಾಂತಿಕ ಹಲ್ಲೆಗೊಳಗಾಗಿರುವ ಶಿವಮೊಗ್ಗ ನಗರದ ಸೀಗೆಹಟ್ಟಿಯ ನಿವಾಸಿ ನಂದನ್ ಅವರನ್ನ ಶಿವಮೊಗ್ಗ ನಗರದ ಶಾಸಕ ಎಸ್.ಎನ್ ಚನ್ನಬಸಪ್ಪ ಅವರು ಭೇಟಿ ಮಾಡಿ, ಆರೋಗ್ಯ ವಿಚಾರಿಸಿ, ಯುವಕನಿಗೆ ಹಾಗೂ ಅವನ ಪೋಷಕರಿಗೆ ಧೈರ್ಯ ತುಂಬುವ ಕೆಲಸ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ, ಮುಸ್ಲಿಂ ಪುಂಡರು ಬಾಲ ಬಿಚ್ಚುವುದು ಎಂದಿನಂತೆ ಮುಂದುವರೆದಿದ್ದು ಇದಕ್ಕೆ ಮತ್ತೊಂದು ಸಾಕ್ಷಿ ಎಂಬಂತೆ ಶಿವಮೊಗ್ಗದ ಘಟನೆ ನಡೆದಿದೆ ಎಂದರು.

ಕಾಂಗ್ರೆಸ್ ಮತ್ತು ಮುಸ್ಲಿಂರ (ಡಿ.ಕೆ.ಬ್ರದರ್ಸ್) ನಡುವಿನ ಸೌಹಾರ್ದಕ್ಕೆ, ಶಿವಮೊಗ್ಗದ ಮತ್ತೋರ್ವ ಹಿಂದೂ ಯುವಕ ಹಲ್ಲೆಗೊಳಗಾಗಿರುವುದು ಅತ್ಯಂತ ಖಂಡನೀಯ ಸಂಗತಿ. ಮಾನ್ಯ ಗೃಹ ಸಚಿವರಾದ ಪರಮೇಶ್ವರ್ ಅವರೇ ಶಿವಮೊಗ್ಗದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಪುಂಡರ ಮಿತಿ ಮೀರಿದ ಹಾವಳಿ ನಡೆಯುತ್ತಿದೆ. ಇನ್ನಾದರೂ ಶಿವಮೊಗ್ಗದ ಕಡೆ ಸ್ವಲ್ಪ ಗಮನ ಹರಿಸಿ ಎಂದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read