ಸೌಂದರ್ಯ ಹೆಚ್ಚಿಸುವ ಹುಬ್ಬುಗಳ ಬಗ್ಗೆ ಇರಲಿ ಕಾಳಜಿ…!

ನಿಮ್ಮ ಮುಖದ ಸೌಂದರ್ಯವನ್ನು ಕಾಪಾಡುವಲ್ಲಿ ಹುಬ್ಬಿನ ಪಾತ್ರವೂ ದೊಡ್ಡದಿದೆ. ದಪ್ಪನೆಯ ಕಪ್ಪಾದ ಹುಬ್ಬುಗಳು ನಿಮ್ಮ ಮುಖಕ್ಕೆ ವಿಶೇಷ ಮೆರುಗನ್ನು ನೀಡುತ್ತವೆ.

ಒಮ್ಮೆ ಐ ಬ್ರೋ ಶೇಪ್ ಮಾಡಿಕೊಂಡ ಎರಡರಿಂದ ಮೂರು ವಾರಗಳಲ್ಲಿ ಮತ್ತೆ ಹುಬ್ಬಿನ ಕೂದಲು ಹುಟ್ಟಿಕೊಳ್ಳುತ್ತದೆ. ನಿತ್ಯ ಅದನ್ನು ಗಮನಿಸುತ್ತಾ ಪ್ಲಕ್ಕರ್ ಸಹಾಯದಿಂದ ಕೀಳುತ್ತಿದ್ದರೆ ಪದೇ ಪದೇ ಬ್ಯೂಟಿ ಪಾರ್ಲರ್ ಗೆ ಹೋಗಬೇಕಿಲ್ಲ.

ಹುಬ್ಬುಗಳನ್ನು ಟ್ರಿಮ್ ಮಾಡುವಾಗ ಎಚ್ಚರಿಕೆಯಿರಲಿ. ಹುಬ್ಬುಗಳಿಗೆ ಹೊಸ ಆಕಾರ ಕೊಡುವ ನೆಪದಲ್ಲಿ ಕತ್ತರಿ ಬಳಸುವಾಗ ತುಸು ಹೆಚ್ಚು ಕಡಿಮೆಯಾದರೂ ಹುಬ್ಬಿನ ಕೂದಲು ವಿರೂಪವಾಗಬಹುದು. ಹಾಗಾಗಿ ಟ್ರಿಮ್ ಮಾಡುವಾಗ, ಬ್ರಶ್ ಬಳಸುವಾಗ ಎಚ್ಚರಿಕೆ ವಹಿಸಿ.

ನಿತ್ಯ ರಾತ್ರಿ ಮಲಗುವ ಮುನ್ನ ಹುಬ್ಬಿನ ಕೂದಲಿಗೆ ಹರಳೆಣ್ಣೆ ಹಚ್ಚಿ ಐದು ನಿಮಿಷ ಮಸಾಜ್ ಮಾಡಿ ಬೆಳಗೆದ್ದು ಮುಖ ತೊಳೆದರೆ ಹುಬ್ಬಿನ ಕೂದಲು ಉದುರುವುದಿಲ್ಲ ಮತ್ತು ಕಪ್ಪಾಗಿ ದಪ್ಪಗಾಗಿ ಬೆಳೆಯುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read