ಮಕ್ಕಳು ಸ್ಮಾರ್ಟ್ ಫೋನ್ ಗೆ ‘ಅಡಿಕ್ಟ್’ ಆಗದಂತೆ ವಹಿಸಿ ಎಚ್ಚರ….!

ಮಕ್ಕಳ ಲೋಕ ಸುಂದರ ಎಂಬುದೇನೋ ನಿಜ. ಆದರೆ ಅವರಿಗೆ ನಿಜವಾದ ರೀತಿಯಲ್ಲಿ ನ್ಯಾಯ ಒದಗಿಸುವುದು ಸವಾಲಿನ ಕೆಲಸವೇ. ಇಲ್ಲಿ ನ್ಯಾಯವೆಂದರೆ ಪೌಷ್ಟಿಕಾಂಶಗಳು. ಮಕ್ಕಳು ಉತ್ತಮ ಆಹಾರವನ್ನು ಸೇವಿಸುವಂತೆ ಮಾಡುವುದು ಒಂದರ್ಥದಲ್ಲಿ ಚಾಲೆಂಜ್ ಕೂಡಾ ಹೌದು.

ತಿನ್ನಲು ಕೇಳದ ಮಗುವಿಗೆ ಸ್ಮಾರ್ಟ್ ಫೋನ್ ಕೊಟ್ಟಾದರೂ ತಿನ್ನಿಸುವ ಹೆತ್ತವರು ಅರಿವಿಲ್ಲದಂತೆ ಮಗುವಿಗೆ ಮೊಬೈಲ್ ಗೀಳು ಅಂಟಿಸಿ ಬಿಡುತ್ತಾರೆ. ಕೊನೆಗೆ ಯಾವುದನ್ನು ಕೊಟ್ಟರೆ ಸರಿ, ಯಾವುದನ್ನು ಕೊಡುವುದು ತಪ್ಪು ಎಂಬ ಗೊಂದಲವೇ ಪೋಷಕರನ್ನು ಕಾಡುತ್ತಿರುತ್ತದೆ.

ಮಗುವಿಗೆ ಐದು ವರ್ಷ ಆಗುವ ತನಕದ ಬೆಳವಣಿಗೆ ಮತ್ತು ಅಭಿವೃದ್ಧಿ ಮಹತ್ವದ ಅಂಶಗಳಾಗುತ್ತವೆ. ಸಮತೋಲಿತ ಆಹಾರ, ಪ್ರೊಟೀನ್, ವಿಟಮಿನ್, ಖನಿಜಗಳು, ಕಾರ್ಬೊಹೈಡ್ರೇಟ್ಸ್ ಮತ್ತು ಕೊಬ್ಬು ಮಕ್ಕಳ ಬೆಳವಣಿಗೆಗೆ ಬಹಳ ಮುಖ್ಯವಾಗುತ್ತವೆ. ತಿನ್ನುವಾಗ ಸ್ಮಾರ್ಟ್ ಫೋನ್ ನೀಡುವ ಬದಲು ಆಟಿಕೆ ನೀಡಿ ಸಂಭಾಳಿಸಿ. ಬಳಿಕ ಅವುಗಳನ್ನು ಹಿಂದೆ ಪಡೆದು ತಿನ್ನುವಂತೆ ಪ್ರೇರೇಪಿಸಿ ಎಂದು ಅಧ್ಯಯನಗಳು ಅಭಿಪ್ರಾಯಪಡುತ್ತವೆ.

ಹೆತ್ತವರು ಕನಿಷ್ಟ ದಿನಕ್ಕೆ ಒಂದು ಗಂಟೆಯಾದರೂ ಮಕ್ಕಳಿಗೆ ಮನೆಯಿಂದ ಹೊರಗೆ ಆಡಲು ಬಿಡಿ. ಯಾವುದೇ ಎಲೆಕ್ಟ್ರಾನಿಕ್ಸ್ ಉಪಕರಣಗಳಿಗೆ ಎಡಿಕ್ಟ್ ಆಗದಂತೆ ನೋಡಿಕೊಳ್ಳಿ. ಜಂಕ್ ಫುಡ್ ಬದಲಿಗೆ ಪೌಷ್ಠಿಕ ಆಹಾರ ನೀಡಿ. ಮಕ್ಕಳನ್ನು ಸರಿಯಾದ ದಾರಿಯಲ್ಲಿ ಕೊಂಡೊಯ್ಯುವುದು ಹೆತ್ತವರ ಕೈಯಲ್ಲೇ ಇರುತ್ತದೆ. ಅವರು ಹೇಗಿರಬೇಕೆಂಬುದನ್ನು ನೀವೇ ನಿರ್ಧರಿಸಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read