ಒಳ ಉಡುಪಿನಲ್ಲಿ ಮೊಬೈಲ್ ಇಟ್ಟುಕೊಳ್ಳುವ ಮುನ್ನ ಇರಲಿ ಈ ಎಚ್ಚರ……!

ಆಧುನಿಕತೆ ಬೆಳೆದಂತೆಲ್ಲಾ ಮನುಷ್ಯನ ಬೇಕುಬೇಡಗಳಿಗಿಂತ ಮುಖ್ಯವಾಗಿ ಕೆಲವು ವಸ್ತುಗಳು ಅನಿವಾರ್ಯವಾಗಿವೆ. ಹಿಂದೆ ಮೊಬೈಲ್ ಬಳಕೆಯೇ ಇರಲಿಲ್ಲ. ಈಗ ಮೊಬೈಲ್ ಬಳಕೆ ಅನಿವಾರ್ಯವಾಗಿದೆ. ಅದರಲ್ಲಿ ಇತ್ತೀಚೆಗಂತೂ ಅಂಡ್ರಾಯಿಡ್ ಫೋನ್, ಸ್ಮಾರ್ಟ್ ಫೋನ್ ಗಳೇ ಮಾರುಕಟ್ಟೆಯಲ್ಲಿ ಸಿಂಹಪಾಲು ಹೊಂದಿವೆ.

ಬಹುತೇಕ ಎಲ್ಲರ ಕೈಯಲ್ಲೂ ಫೋನ್ ಗಳು ಇದ್ದು, ಜನಸಂಖ್ಯೆಗಿಂತ ಜಾಸ್ತಿ ಮೊಬೈಲ್ ಇವೆ ಎಂದು ಹೇಳಲಾಗಿದೆ. ಮೊಬೈಲ್ ಬಳಕೆ ಹೆಚ್ಚಾಗಿದ್ದರೂ, ಅದನ್ನು ಹೇಗೆ ಇಟ್ಟುಕೊಳ್ಳಬೇಕೆಂಬುದೇ ಬಹುತೇಕರಿಗೆ ತಿಳಿದೇ ಇರುವುದಿಲ್ಲ.

ಹೀಗೆ ಮೊಬೈಲ್ ಅನ್ನು ನಿಮ್ಮ ಪ್ಯಾಂಟ್, ಶರ್ಟ್ ಜೇಬಿನಲ್ಲಿ, ಪರ್ಸ್ ಗಳಲ್ಲಿ ಇಟ್ಟುಕೊಳ್ಳುವುದೇನೋ ಸರಿ. ಆದರೆ, ಕೆಲವರು ಮೊಬೈಲ್ ಅನ್ನು ಒಳ ಉಡುಪುಗಳಲ್ಲಿ ಭದ್ರವಾಗಿಡುತ್ತಾರೆ. ಇದರಿಂದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತದೆ. ಮೊಬೈಲ್ ಗಳಿಂದ ಹೊರ ಸೂಸುವ ವಿಕಿರಣಗಳು ಆರೋಗ್ಯದ ಮೇಲೆ ಪರಿಣಾಮ ಉಂಟು ಮಾಡುತ್ತವೆ ಎಂದು ಸಂಶೋಧನೆಯೊಂದರಲ್ಲಿ ದೃಢಪಟ್ಟಿದೆ.

ವಿಜ್ಞಾನಿಯೊಬ್ಬರು ಮೊಬೈಲ್ ಫೋನ್ ವಿಕಿರಣಗಳಿಂದ ಉಂಟಾಗುತ್ತಿರುವ ಪರಿಣಾಮಗಳ ಬಗ್ಗೆ ಹಲವು ವರ್ಷಗಳಿಂದ ಸಂಶೋಧನೆ ನಡೆಸಿದ್ದು, ಒಳ ಉಡುಪು, ಪ್ಯಾಂಟ್ ಗಳಲ್ಲಿ ಮೊಬೈಲ್ ಇಟ್ಟುಕೊಳ್ಳುವುದರಿಂದ ಪುರುಷರ ಫಲವತ್ತತೆ ಕಡಿಮೆಯಾಗುತ್ತದೆ. ಮೆದುಳಿನ ಹಾಗೂ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಉಂಟಾಗಬಹುದೆಂದು ಎಚ್ಚರಿಕೆ ನೀಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read