ನಿವೇಶನ ಖರೀದಿಸಿ 3 ವರ್ಷದಲ್ಲಿ ಮನೆ ಕಟ್ಟದವರಿಗೆ ಮಾರ್ಗಸೂಚಿ ದರದ ಶೇ. 10 ರಷ್ಟು ದಂಡ ಪಾವತಿ ಕಡ್ಡಾಯ

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ನಿವೇಶನ ಖರೀದಿಸಿ ಲೀಸ್ ಕಂ ಅಗ್ರಿಮೆಂಟ್ ಮಾಡಿಸಿಕೊಂಡು ಮೂರು ವರ್ಷದಲ್ಲಿ ಮನೆ ಕಟ್ಟದೆ ಒಪ್ಪಂದ ನಿಯಮ ಉಲ್ಲಂಘಿಸಿದವರಿಗೆ ನಿವೇಶನದ ಮಾರ್ಗಸೂಚಿ ದರದ ಶೇಕಡ 10 ರಷ್ಟು ದಂಡಪಾವತಿ ಕಡ್ಡಾಯವಾಗಿದೆ.

ನಾಡಪ್ರಭು ಕೆಂಪೇಗೌಡ ಬಡಾವಣೆ, ಅರ್ಕಾವತಿ ಬಡಾವಣೆ ಹೊರತುಪಡಿಸಿ ಬಿಡಿಎ ನಿರ್ಮಿಸಿದ ಬಡಾವಣೆಗಳು ಇದರ ವ್ಯಾಪ್ತಿಗೆ ಬರುತ್ತವೆ. 2024ರ ಸೆಪ್ಟೆಂಬರ್ 23ರಿಂದ ಅನ್ವಯವಾಗುವಂತೆ ಮಾರ್ಗಸೂಚಿ ದರದ ಶೇಕಡ 10 ರಷ್ಟು ದಂಡ ನಿಗದಿಪಡಿಸಲಾಗಿದೆ.

ಯಾವ ನಿವೇಶನಗಳು ತಕರಾರಿನಿಂದ ಕೂಡಿರುತ್ತವೆಯೋ ಅಂತಹ ನಿವೇಶನಗಳಿಗೆ ದಂಡದಿಂದ ವಿನಾಯಿತಿ ಸಿಗಲಿದೆ. ಉಳಿದಂತೆ ಲೀಸ್ ಕಂ ಅಗ್ರಿಮೆಂಟ್ ಆಗಿ ಮೂರು ವರ್ಷ ಮೀರಿದ ಎಲ್ಲಾ ನಿವೇಶನಗಳಿಗೆ ದಂಡ ಪಾವತಿ ಅನ್ವಯವಾಗುತ್ತದೆ.

ಬಿಡಿಎ ಕಾಯ್ದೆಯ ಪ್ರಕಾರ ನಿಗದಿತ ಅವಧಿಯಲ್ಲಿ ಮನೆ ನಿರ್ಮಿಸದಿದ್ದರೆ ಅಂತಹ ನಿವೇಶನಗಳನ್ನು ವಶಪಡಿಸಿಕೊಳ್ಳುವ ಅಧಿಕಾರ ಬಿಡಿಎಗೆ ಇದೆ. ಈ ಕ್ರಮವನ್ನು ಪ್ರಶ್ನಿಸಿ ಕೆಲವು ಗ್ರಾಹಕರು ಕೋರ್ಟ್ ಮೊರೆ ಹೋಗಿದ್ದರು. ಹೀಗಾಗಿ ನಿವೇಶನ ವಾಪಸ್ ಪಡೆಯದೆ ದಂಡವ ವಸೂಲಿಗೆ ನಿರ್ಧರಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read