ಶಾಸಕರಿಗೇ ಭೂಗಳ್ಳರ ಬಿಗ್ ಶಾಕ್: ಶಾಸಕರ ನಿವೇಶನವನ್ನೇ ಕಬಳಿಸಿದ ಖದೀಮರು

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಶಾಸಕ ಗೂಳಿಹಟ್ಟಿ ಶೇಖರ್ ಸೇರಿದಂತೆ ಮೂವರು ಶಾಸಕರ ನಿವೇಶನಗಳನ್ನು ಕಬಳಿಸಲಾಗಿದೆ.

ಭೂಗಳ್ಳರು ನಕಲಿ ದಾಖಲೆ ಸೃಷ್ಟಿಸಿ ತಮಗೆ ಮಂಜೂರಾಗಿದ್ದ ಬಿಡಿಎ ನಿವೇಶನ ಕಬಳಿಸಿದ್ದಾಗಿ ಶಾಸಕ ಗೂಳಿಹಟ್ಟಿ ಶೇಖರ್ ಆರೋಪಿಸಿದ್ದು, ಸಂಜಯನಗರ ಠಾಣೆಗೆ ದೂರು ನೀಡಿದ್ದಾರೆ. ಗೂಳಿಹಟ್ಟಿ ಶೇಖರ್ ನೀಡಿದ ದೂರಿನ ಮೇರೆಗೆ ಹಲಸೂರು ನಿವಾಸಿ ರಾಮಮೂರ್ತಿ, ಅನುರಾಧ, ದೀಪಿಕಾ, ನಿವೇದಿತಾ, ಸಾಚ್ಯಮಾಟೆ ಡೆವಲಪರ್ಸ್, ಜೆಪಿ ನಗರದ ಜೆಮ್ಮಿ ರಾಹೂರ್, ಮಲ್ಲೇಶ್ವರಂ ನ ಶ್ರೀಕೃಷ್ಣ ಕನ್ಸ್ಟ್ರಕ್ಷನ್ ಇಂಡಿಯಾ ಕಂಪನಿ, ಮಂಜೇಗೌಡ, ಆನಂದಮೂರ್ತಿ, ಎಂ.ಡಿ. ಕೈಲಾಶ್ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

2008 ರಲ್ಲಿ ಗೂಳಿಹಟ್ಟಿ ಶೇಖರ್ ಅವರಿಗೆ ಲೊಟ್ಟೆಗೊಲ್ಲಹಳ್ಳಿಯ ರಾಜಮಹಲ್ ವಿಲಾಸ ಎರಡನೇ ಹಂತದಲ್ಲಿ 50X80 ಅಳತೆಯ ಜಿ ಕೆಟಗರಿ ನಿವೇಶನ ಮಂಜೂರು ಮಾಡಲಾಗಿದೆ. ಗೂಳಿಹಟ್ಟಿ ಶೇಖರ್, ಅಭಯ ಪಾಟೀಲ್ ಮತ್ತು ಪಿ.ಎಂ. ನರೇಂದ್ರಸ್ವಾಮಿ ಅವರಿಗೆ ನಿವೇಶನ ಹಂಚಿಕೆ ಮಾಡಲಾಗಿದೆ.

ಗೂಳಿಹಟ್ಟಿ ಶೇಖರ್ ಅವರು ನಿಗದಿತ ದರ ಪಾವತಿಸಿ ತಮ್ಮ ಹೆಸರಿಗೆ ನಿವೇಶನ ನೋಂದಣಿ ಮಾಡಿಸಿಕೊಂಡಿದ್ದಾರೆ. ನಿವೇಶನದ ಮೇಲೆ ಜನತಾ ಕೋ ಆಪರೇಟಿವ್ ಬ್ಯಾಂಕ್ ನಲ್ಲಿ ಸಾಲ ಪಡೆದುಕೊಂಡಿದ್ದಾರೆ. ಶಾಸಕರ ಈ ನಿವೇಶನಕ್ಕೆ ನಕಲಿ ದಾಖಲೆ ಸೃಷ್ಟಿಸಿದ ಭೂಗಳ್ಳರು ನೋಂದಣಿ ಮಾಡಿಸಿಕೊಂಡಿದ್ದಾರೆ. ಅಭಯ ಪಾಟೀಲ್ ಮತ್ತು ನರೇಂದ್ರ ಸ್ವಾಮಿಯವರಿಗೆ ಹಂಚಿಕೆಯಾಗಿದ್ದ ನಿವೇಶನಗಳಿಗೂ ನಕಲಿ ದಾಖಲೆ ಸೃಷ್ಟಿಸಿ ನೊಂದಣಿ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read