ಟಿ20 ವಿಶ್ವಕಪ್ ಗೆ ಭಾರತ ತಂಡ ಪ್ರಕಟಕ್ಕೆ ಬಿಸಿಸಿಐ ಸಿದ್ಧತೆ

ನವದೆಹಲಿ: ಜೂನ್‌ನಲ್ಲಿ ಪ್ರಾರಂಭವಾಗಲಿರುವ T20 ವಿಶ್ವಕಪ್ ಗಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ತಂಡವನ್ನು ಪ್ರಕಟಿಸಲಿದೆ.

ಭಾರತೀಯ ಕ್ರಿಕೆಟ್ ಅಭಿಮಾನಿಗಳು ಈ ಬಗ್ಗೆ ಉತ್ಸುಕರಾಗಿದ್ದಾರೆ. ಮುಂದಿನ ವಾರಗಳಲ್ಲಿ ತಂಡದ ಘೋಷಣೆ ನಡೆಯಲಿದೆ ಎಂದು ಹೇಳಲಾಗಿದೆ.

ಐಪಿಎಲ್ ಸಮಯದಲ್ಲಿ ತಂಡ ಪ್ರಕಟ

T20 ವಿಶ್ವಕಪ್ ಗಾಗಿ ಭಾರತ ತಂಡವನ್ನು IPL ವೇಳೆಯಲ್ಲೇ ಪ್ರಕಟಿಸುವ ಸಾಧ್ಯತೆ ಇದೆ. ಐಪಿಎಲ್ ನಲ್ಲಿ ಭಾರತೀಯ ಆಟಗಾರರ ಅತ್ಯುತ್ತಮ ಪ್ರದರ್ಶನಗಳು ಬಿಸಿಸಿಐ ಆಯ್ಕೆಗಾರರ ಗಮನ ಸೆಳೆದಿವೆ. ಈ ಪ್ರಕಟಣೆಯು ಅನೇಕ ಯುವ ಆಟಗಾರರ ಭವಿಷ್ಯವನ್ನು ಬಹಿರಂಗಪಡಿಸಬಹುದು.

2024 ರ ಟಿ20 ವಿಶ್ವಕಪ್‌ ಗೆ ತಮ್ಮ ತಂಡಗಳನ್ನು ಪ್ರಕಟಿಸಲು ಎಲ್ಲಾ ದೇಶಗಳಿಗೆ ಮೇ 1 ರ ವರೆಗೆ ಅವಕಾಶವಿದೆ ಮತ್ತು ಟೀಮ್ ಇಂಡಿಯಾದ ಘೋಷಣೆಯ ಬಗ್ಗೆ ಚರ್ಚಿಸಲು ಬಿಸಿಸಿಐ ಏಪ್ರಿಲ್ 27 ಅಥವಾ 28 ರಂದು ಸಭೆಯನ್ನು ಕರೆಯುವ ನಿರೀಕ್ಷೆಯಿದೆ.

ನಾಯಕ ರೋಹಿತ್ ಶರ್ಮಾ ಹೊರತುಪಡಿಸಿ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ, ರಿಷಭ್ ಪಂತ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್ ಮತ್ತು ಕುಲದೀಪ್ ಯಾದವ್ ತಂಡದಲ್ಲಿ ತಮ್ಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಉಳಿದ ಸ್ಥಾನಗಳಿಗೆ, ವಿಶೇಷವಾಗಿ ಬ್ಯಾಕ್‌ ಅಪ್ ವಿಕೆಟ್‌ ಕೀಪರ್ ಪಾತ್ರಕ್ಕಾಗಿ ಐಪಿಎಲ್‌ನಲ್ಲಿ ಉನ್ನತ ಪ್ರದರ್ಶನ ನೀಡಿದ ಹಲವರ ನಡುವೆ ತೀವ್ರ ಪೈಪೋಟಿ ಇದೆ. ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ಕೆಎಲ್ ರಾಹುಲ್, ಜಿತೇಶ್ ಶರ್ಮಾ ಮತ್ತು ಧ್ರುವ್ ಜುರೆಲ್ ಅವರಂತಹ ಆಟಗಾರರು ಸ್ಪರ್ಧೆಯಲ್ಲಿದ್ದಾರೆ.

https://twitter.com/faisal7y/status/1781612304796209392

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read