ಲಿಂಗ ಸಮಾನತೆ ಬಗ್ಗೆ ಬಿಸಿಸಿಐ ಮಹತ್ವದ ನಿರ್ಧಾರ: ಪುರುಷರು –ಮಹಿಳೆಯರಿಗೆ ಒಂದೇ ರೀತಿ ಬಹುಮಾನದ ಮೊತ್ತ: ಜಯ್ ಶಾ ಘೋಷಣೆ

ನವದೆಹಲಿ: ಎಲ್ಲಾ ಐಸಿಸಿ ಟೂರ್ನಿಗಳಲ್ಲಿ ಬಹುಮಾನದ ಮೊತ್ತವು ಪುರುಷರು ಮತ್ತು ಮಹಿಳೆಯರಿಗೆ ಒಂದೇ ಆಗಿರುತ್ತದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಘೋಷಿಸಿದ್ದಾರೆ.

ಸಮಾನತೆ ಮತ್ತು ಸಬಲೀಕರಣದ ಹೊಸ ಯುಗ ಆರಂಭ. ಲಿಂಗ ಸಮಾನತೆ ಕಡೆಗೆ ಒಂದು ಪ್ರಮುಖ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಘೋಷಿಸಲು ನಾನು ರೋಮಾಂಚನಗೊಂಡಿದ್ದೇನೆ. ಐಸಿಸಿಯ ಎಲ್ಲಾ ಟೂರ್ನಿಗಳಲ್ಲಿ ಬಹುಮಾನದ ಹಣ ಪುರುಷರು ಮತ್ತು ಮಹಿಳೆಯರಿಗೆ ಒಂದೇ ಆಗಿರುತ್ತವೆ ಎಂದು ತಿಳಿಸಿದ್ದಾರೆ.

ಈ ಮಹತ್ವದ ಪ್ರಯತ್ನವನ್ನು ಸಾಧಿಸಲು ಸಹಾಯ ಮಾಡುವಲ್ಲಿ ಬೆಂಬಲ ನೀಡಿದ ಸಹ ಮಂಡಳಿಯ ಸದಸ್ಯರಿಗೆ ನಾನು ಧನ್ಯವಾದ ಹೇಳುತ್ತೇನೆ. ಕ್ರಿಕೆಟ್ ಭವಿಷ್ಯದ ಕಡೆಗೆ ಕೆಲಸ ಮಾಡೋಣ ಎಂದು ಜಯ್ ಶಾ ಟ್ವೀಟ್ ಮಾಡಿದ್ದಾರೆ.

https://twitter.com/ANI/status/1679496498151825415

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read