ಕಚೇರಿಯಲ್ಲಿ ತಾಯಿ ಬದಲು ಪುತ್ರನಿಂದಲೇ ಕೆಲಸ: ಇಬ್ಬರು ನೌಕರರು ಅಮಾನತು

ಬೆಂಗಳೂರು: ಬಿಬಿಎಂಪಿ ದಕ್ಷಿಣ ವಲಯ ಕೆಂಪೇಗೌಡ ನಗರ ಉಪ ವಿಭಾಗ ಕಚೇರಿಯಲ್ಲಿ ಲೋಕಾಯುಕ್ತ ದಾಳಿಯ ವೇಳೆ ಕಚೇರಿಯ ಎಸ್‌ಡಿಎ ಕವಿತಾ ತಮ್ಮ ಬದಲಿಗೆ ಪುತ್ರನನ್ನು ಕೆಲಸಕ್ಕೆ ಕಳುಹಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಡಿಎ ಕವಿತಾ ಸೇರಿ ಇಬ್ಬರನ್ನು ಬಿಬಿಎಂಪಿ ಆಡಳಿತ ವಿಭಾಗ ಅಮಾನತು ಮಾಡಿ ಆದೇಶಿಸಿದೆ.

ಬಿಬಿಎಂಪಿ ದಕ್ಷಿಣ ವಲಯ ಕೆಂಪೇಗೌಡ ನಗರ ಉಪವಿಭಾಗ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಸೇರಿದಂತೆ ವಿವಿಧ ದೂರುಗಳು ಕೇಳಿ ಬಂದ ಬಗ್ಗೆ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಜನವರಿ 10ರಂದು ಕಚೇರಿ ಮೇಲೆ ದಾಳಿ ನಡೆಸಿದ್ದರು.

ದಾಳಿಯ ಸಂದರ್ಭದಲ್ಲಿ ಎಸ್.ಡಿ.ಎ. ಕವಿತಾ ಅವರ ಬದಲಿಗೆ ಅವರ ಪುತ್ರ ತಾಯಿಯ ಲಾಗಿನ್ ಐಡಿ, ಪಾಸ್ವರ್ಡ್ ಬಳಸಿ ಇ- ಖಾತಾ ತಿದ್ದುಪಡಿ ಮಾಡಿ ಮುಂದಿನ ಕ್ರಮಕ್ಕೆ ಮಂಡಿಸುತ್ತಿರುವುದು ಪತ್ತೆಯಾಗಿದೆ. ಈ ಬಗ್ಗೆ ಲೋಕಾಯುಕ್ತ ಪೊಲೀಸರು ಪ್ರಶ್ನಿಸಿದಾಗ ಎಸ್.ಡಿ.ಎ. ಕವಿತಾ ಮನೆಯಲ್ಲಿದ್ದು, ತಾಯಿಯ ಬದಲಿಗೆ ತಾನು ಸಾರ್ವಜನಿಕರಿಗೆ ತೊಂದರೆ ಆಗಬಾರದೆಂದು ಕೆಲಸ ಮಾಡುತ್ತಿರುವುದಾಗಿ ಹೇಳಿದ್ದ.

ಸಿದ್ದಾಪುರ ಠಾಣೆಯಲ್ಲಿ ಲೋಕಾಯುಕ್ತ ಪೊಲೀಸರು ದೂರು ದಾಖಲಿಸಿ, ಕವಿತಾ ಮತ್ತು ಅವರ ಪುತ್ರನ ವಿರುದ್ಧ ಕ್ರಮಕ್ಕೆ ಸೂಚಿಸಿದ್ದರು. ಬಿಬಿಎಂಪಿ ಆಡಳಿತ ವಿಭಾಗದಿಂದ ಕವಿತಾ ಅವರನ್ನು ಅಮಾನತು ಮಾಡಲಾಗಿದ್ದು, ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಈ ರೀತಿಯ ಅವ್ಯವಸ್ಥೆ ನಡೆಯುತ್ತಿದ್ದರೂ ತಡೆಯದ ಹಿನ್ನೆಲೆಯಲ್ಲಿ ಎ.ಆರ್.ಒ. ಸುಜಾತ ಅವರನ್ನು ಕೂಡ ಅಮಾನತು ಮಾಡಿ ಆದೇಶಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read