BBMP ಕಚೇರಿಯಲ್ಲಿ ಬೆಂಕಿ ಅವಘಡ; ಎಇಇ ಆಡಿಯೋ ಬಿಡುಗಡೆ; ದುರಂತದ ರಹಸ್ಯ ಬಯಲು

ಬೆಂಗಳೂರು: ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ಸಂಭವಿಸಿದ ಬೆಂಕಿ ಅವಘಡಕ್ಕೆ ಕಾರಣವೇನು ಎಂಬ ರಹಸ್ಯ ಬಯಲಾಗಿದೆ. ಬಿಬಿಎಂಪಿ ಎಇಇ ಆನಂದ್ ಮಾತನಾಡಿರುವ ಆಡಿಯೋ ಬಿಡಿಗಡೆಯಾಗಿದೆ.

ಬಿಬಿಎಂಪಿ ಆವರಣದ ಲ್ಯಾಬ್ ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು ಹೇಗೆ ಎಂಬ ಬಗ್ಗೆ ಎಇಇ ಆನಂದ್, ಅಮೃತ್ ರಾಜ್ ಜೊತೆ ಮಾತನಾಡಿರುವ ಆಡಿಯೋದಲ್ಲಿ ಮಾಹಿತಿ ನೀಡಿದ್ದಾರೆ. ಘಟನೆ ಬಗ್ಗೆ ವಿವರಿಸಿದ್ದಾರೆ.

ಮೊದಲಿನಿಂದಲೂ ನಾವು ಲ್ಯಾಬ್ ಟೆಸ್ಟ್ ಮಡುತ್ತಿದ್ದೇವೆ. ಎಲ್ಲಾ ಸ್ಯಾಂಪಲ್ ಕಲೆಕ್ಟ್ ಮಾಡಿ ಅಲ್ಲಿ ಟೆಸ್ಟ್ ಮಾಡುತ್ತೇವೆ. ಮೊದಲೇ ಅವರಿಗೆ ಟ್ರೈನಿಂಗ್ ಆಗಿರುತ್ತೆ. ಬೆಲ್ಜಿನ್ ಕೆಮಿಕಲ್ ಹಾಕಿ ಟೆಸ್ಟ್ ಮಾಡುವಾಗ ಸೋರಿಕೆಯಾಗಿದೆ. ಬೆಲ್ಜಿನ್ ಹಾಕಿ ವಾಶ್ ಮಾಡುವಾಗ ಹೊರಗೆ ಹೋಗಿದೆ. ಈ ವೇಳೆ ಬೆಂಕಿ ಅವಘಡ ಸಂಭವಿಸಿದೆ.

ಕೆಲವೇ ಸೆಕೆಂಡ್ ಗಳಲ್ಲಿ ಬೆಂಕಿ ಹೊತ್ತಿಕೊಂಡಿದೆ. ಮೆಟ್ಟಿಲುಗಳ ಬಳಿಯು ಬೆಂಕಿ ಆವರಿಸಿದೆ. ಸಿಬ್ಬಂದಿಗಳಿಗೆ ಹೊರಹೋಗಲು ಬೇರೆ ದಾರಿಯಿರಲಿಲ್ಲ. ಹಾಗಾಗಿ ಬೆಂಕಿ ತಗುಲಿದೆ ಎಂದು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read