BIG NEWS: ಕಣ್ಣು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಬಾಲಕ

ಬೆಂಗಳೂರು: ಬಿಬಿಎಂಪಿ ಮೈದಾನದಲ್ಲಿ ಆಟವಾಡಲು ಹೋಗಿ ಗೇಟು ಬಿದ್ದು 10 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಮಲ್ಲೇಶ್ವರಂ ನಲ್ಲಿ ನಡೆದಿತ್ತು. ಇದೀಗ ಮೃತ ಬಾಲಕ ತನ್ನ ಕಣ್ಣುಗಳನ್ನು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾನೆ.

ಬಾಲಕ ನಿರಂಜನ್ (10) ನಿನ್ನೆ ಸಂಜೆ ಬಿಬಿಎಂಪಿ ಮೈದಾನದಲ್ಲಿ ಆಟವಾಡಲೆಂದು ಹೋಗಿದ್ದ ವೇಳೆ ಮೈದಾನದ ಗೇಟ್ ತೆರೆಯುತ್ತಿದ್ದಂತೆ ಆತನ ಮೈಮೇಲೆ ಗೇಟ್ ಬಿದ್ದು ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದ. ಇಂದು ಬಾಲಕನ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಕುಟುಂಬಕ್ಕೆ ಮೃತದೇಹ ಹಸ್ತಾಂತರಿಸಲಾಗಿದೆ. ಬಾಲಕನ ಕಣ್ಣು ದಾನ ಮಡಲಾಗಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಬಾಲಕನ ತಂದೆ ವಿಜಯ್ ಮಾಹಿತಿ ನೀಡಿದ್ದು, ಮಗ ನಿರಂಜನ್ ನ ಕಣ್ಣುಗಳನ್ನು ದಾನ ಮಾಡಿದ್ದೇವೆ. 10 ವರ್ಷದ ಮಗನನ್ನು ಕಳೆದುಕೊಂಡು ದಿಕ್ಕು ತೋಚದಾಗಿದ್ದೇವೆ. ಆದರೆ ನಮ್ಮ ಮಗನ ಕಣ್ಣುಗಳು ಇನ್ನೋಬ್ಬರ ಜೀವನದ ಬೆಳಕಾಗಿ, ಆ ಕಟ್ಟುಗಳು ಪ್ರಪಂಚವನ್ನು ನೋಡಲಿ ಎಂಬ ಕಾರಣಕ್ಕೆ ಮೃತ ಮಗನ ಕಣ್ಣುಗಳನ್ನು ದಾನ ಮಾಡಿರುವುದಾಗಿ ತಿಳಿಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read