BIG NEWS : ಇಂದಿನಿಂದ ‘BBMP’ ಇ-ಖಾತಾ ವ್ಯವಸ್ಥೆಯ ಪರೀಕ್ಷಾರ್ಥ ಆರಂಭ : DCM ಡಿಕೆ ಶಿವಕುಮಾರ್

ಬೆಂಗಳೂರು : ಫೇಸ್ಲೆಸ್, ಸಂಪರ್ಕ ರಹಿತ ಹಾಗೂ ಆನ್ಲೈನ್ ಮೂಲಕ ಬಿಬಿಎಂಪಿ ಇ-ಖಾತಾ ವಿತರಣಾ ವ್ಯವಸ್ಥೆಯನ್ನು ಪರೀಕ್ಷಾರ್ಥವಾಗಿ ಇಂದಿನಿಂದ ಆರಂಭಿಸಲಾಗಿದೆ. ನಿಮ್ಮ ಸ್ವತ್ತಿನ ಇ-ಖಾತಾ ಕರಡು ಪ್ರತಿಯನ್ನು ಡೌನ್ಲೋಡ್ ಮಾಡಲು ಈ ಕೆಳಗಿನ ವೆಬ್ ವಿಳಾಸಕ್ಕೆ ಭೇಟಿ ನೀಡಬಹುದಾಗಿದೆ.

ಫೇಸ್ಲೆಸ್, ಸಂಪರ್ಕ ರಹಿತ ಹಾಗೂ ಆನ್ಲೈನ್ ಮೂಲಕ ಬಿಬಿಎಂಪಿ ಇ-ಖಾತಾ ವಿತರಣಾ ವ್ಯವಸ್ಥೆಯನ್ನು ಪರೀಕ್ಷಾರ್ಥವಾಗಿ ಅಕ್ಟೋಬರ್ 1 ರಿಂದ ಆರಂಭಿಸಲಾಗುತ್ತಿದೆ.

ಬಿಬಿಎಂಪಿಯಲ್ಲಿ ಲಭ್ಯವಿರುವ ದಾಖಲೆಗಳ ಆಧಾರದಲ್ಲಿ ಕರಡು 2- www.bbmpeaasthi.karnataka.gov.in ರಚಿಸಿ, ಇರಿಸಲಾಗಿದೆ.

> ನಾಗರಿಕರು ತಮ್ಮ ಸ್ವತ್ತಿನ ಕರಡು ಇ- ಖಾತಾವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
> ಅಂತಿಮ ಇ-ಖಾತಾವನ್ನು ಪಡೆಯಲು ಆಧಾರ್ ಇ-ಕೆವೈಸಿ, ಸ್ವತ್ತಿನ ಜಿಪಿಎಸ್ ದತ್ತಾಂಶ, ಛಾಯಾಚಿತ್ರ, ಸ್ವತ್ತಿನ ನೋಂದಾಯಿತ ದಸ್ತಾವೇಜು, 2004ರ ಏಪ್ರಿಲ್ 1ರಿಂದ ಈವರೆಗಿನ ಋಣಭಾರ ಪ್ರಮಾಣಪತ್ರ (ಇ.ಸಿ), ಬೆಸ್ಕಾಂ ಮೀಟರ್ ಸಂಖ್ಯೆ ಎ-ಖಾತಾ ಎಂದು ದೃಢೀಕರಿಸುವ ದಾಖಲೆಗಳನ್ನು ಆನ್ಲೈನ್ನಲ್ಲಿ ಅಪ್ಲೋಡ್ ಮಾಡಬೇಕು ಎಂದು ಡಿಸಿಎಂ ಡಿಕೆ ಶಿವಕುಮಾರ್ ಮಾಹಿತಿ ಹಂಚಿಕೊಂಡಿದ್ದಾರೆ.

https://twitter.com/DKShivakumar/status/1841028036831166716

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read