ಆಸ್ತಿ ಮಾಲಿಕರಿಗೆ ಗುಡ್ ನ್ಯೂಸ್: ಕಟ್ಟಡಗಳ ಹೊಸ ಖಾತಾ ಪಡೆಯಲು ಅರ್ಜಿ ಸಲ್ಲಿಕೆ ಸರಳೀಕರಣ

ಬೆಂಗಳೂರು: ಕಟ್ಟಡಗಳ ಹೊಸ ಖಾತೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಸರಳೀಕರಣ ಮಾಡಲಾಗಿದೆ. ನಗರದ ಬಹುಮಹಡಿ ಕಟ್ಟಡ ನಿರ್ಮಾಣ ಸಂಸ್ಥೆಗಳು, ಮಾಲೀಕರು ಫ್ಲಾಟ್ ಹಾಗೂ ವಾಣಿಜ್ಯ ಘಟಕಗಳಿಗೆ ಹೊಸ ಖಾತಾ ಪಡೆಯಲು ಸರಳವಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ವ್ಯವಸ್ಥೆ ಮಾಡಲಾಗಿದೆ.

ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಮಾಹಿತಿ ನೀಡಿದ್ದು, ಬಿಬಿಎಂಪಿ ವೆಬ್ಸೈಟ್ https://BBMP.karnataka.gov.in/NewKhata ನಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಈಗಾಗಲೇ ಬಿಬಿಎಂಪಿ ಖಾತೆ ಹೊಂದಿದ್ದರೆ ಇ- ಖಾತಾ ಪಡೆಯಲು ಹೊಸ ಖಾತಾ ಪಡೆಯಲು ಅರ್ಜಿ ಸಲ್ಲಿಸಬಾರದು. ಅದನ್ನು ನಕಲಿ ಖಾತೆ ಪಡೆಯುವ ಪ್ರಯತ್ನ ಎಂದು ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು.

ಸಂಸ್ಥೆಯ ಪ್ರತಿನಿಧಿ ಅಥವಾ ಮಾಲೀಕರ ಆಧಾರ್ ಸಂಖ್ಯೆ, ಎ-ಖಾತಾ ಬೇಕಾದಲ್ಲಿ ಕಟ್ಟಡದ ಅನುಮೋದಿತ ನಕ್ಷೆ, ಸ್ವಾಧೀನ ಪ್ರಮಾಣ ಪತ್ರ ಮತ್ತು ಆಸ್ತಿಯ ಭಾವಚಿತ್ರ ಸಲ್ಲಿಸಿದಲ್ಲಿ ಹೊಸ ಖಾತಾ ನೀಡಲಾಗುವುದು ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read