ವಿಪಕ್ಷದವರನ್ನು ಹಣಿಯಲು ಹಲವು ಕೇಸ್ ಹಾಕಿಸಿ, ಹಿರಿಯ ಅಧಿಕಾರಿಗಳ ದುರುಪಯೋಗ: ಸರ್ಕಾರದ ವಿರುದ್ಧ ಬೊಮ್ಮಾಯಿ ಆರೋಪ

ಹುಬ್ಬಳ್ಳಿ: ರಾಜ್ಯದಲ್ಲಿ ವಿಪಕ್ಷದವನ್ನು ಹಣಿಯಲು ಹಲವಾರು ಕೇಸ್ ಹಾಕಿಸಿ, ಹಿರಿಯ ಅಧಿಕಾರಿಗಳನ್ನು ದುರುಪಯೋಗ ಮಾಡಿಕೊಳ್ಳುವ ಮಟ್ಟಕ್ಕಿಳಿದಿದ್ದಾರೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ್ ಬೊಮ್ಮಾಯಿ, ರಾಜ್ಯದಲ್ಲಿ ರಾಜಕಾರಣ ಕೆಳಮಟ್ಟಕ್ಕೆ ಹೋಗಿದೆ. ಸ್ವಜನ ಪಕ್ಷಪಾತ ನಡೆಯುತ್ತಿದೆ. ರಾಜಕೀಯದಲ್ಲಿ ರಕ್ಷಣೆ ಇರುವ ಕಾರಣ ಅಧಿಕಾರಿಗಳಿಂದ ಕೀಳು ಮಟ್ಟದ ಮಾತು ಬರುತ್ತಿವೆ. ಇಂತಹ ಕೆಳಮಟ್ಟದ ರಾಜಕೀಯ ಹಿಂದೇಂದು ನಡೆದಿರಲಿಲ್ಲ ಎಂದು ಕಿಡಿಕಾರಿದರು.

ತಮ್ಮ ಮೇಲೆ ಆರೋಪದ ಕಪ್ಪು ಚುಕ್ಕೆ ಬಂದರೆ ಎಲ್ಲರಿಗೂ ಮಸಿ ಬಳಿಯುವ ಪ್ರಯತ್ನ ಆಗುತ್ತಿದೆ. ಇದು ಬಹಳಷ್ಟು ದಿನ ನಡೆಯುದಿಲ್ಲ. ಅಂತಿಮವಾಗಿ ಕಾನೂನು ತನ್ನ ಕೆಲಸ ಮಾಡುತ್ತದೆ ಎಂದು ಹೇಳಿದರು.

ಶಾಸಕ ಯತ್ನಾಳ್ ರಾಜ್ಯದಲ್ಲಿ ಸಿಎಂ ಆಗಲು ಕೆಲವರು ಸಾವಿರ ಕೋಟಿ ಹಣ ಇಟ್ಟುಕೊಂಡು ಕಾಯುತ್ತಿದ್ದಾರೆ ಎಂಬ ಹೇಳಿಕೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಅವರು ಯಾವ ಮಾಹಿತಿಯಿಂದ ಹೇಳುತ್ತಿದ್ದಾರೆ ಅವರನ್ನೇ ಕೇಳಬೇಕು ನನಗೇನು ಮಾಹಿತಿ ಇಲ್ಲ. ಅವರ ಬಗ್ಗೆ ಪ್ರತಿಕ್ರಿಯೆ ನೀಡುವುದೂ ಇಲ್ಲ ಎಂದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read