ಫ್ಲೈ ಓವರ್ ಗಾಗಿ ರಾತ್ರೋರಾತ್ರಿ ಬಸವೇಶ್ವರ ಪುತ್ಥಳಿ ಸ್ಥಳಾಂತರ…..!

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಅಭಿವೃದ್ಧಿ ಕಾಮಾಗಾರಿ ನಡೆಯುತ್ತಿದೆ. ಇದರಲ್ಲಿ ಫ್ಕೈ ಓವರ್ ನಿರ್ಮಾಣ ಕೂಡ ಒಂದು. ಹಲವಾರು ದಶಕಗಳಿಂದ ಇಲ್ಲಿನ ಹಳೇಬಸ್ ನಿಲ್ದಾಣದ ಮುಂದಿನ ಬಸವ ವನದಲ್ಲಿದ್ದ ಬಸವೇಶ್ವರ ಪುತ್ಥಳಿ ಇದೆ. ಇದರಿಂದ ಫ್ಲೈ ಓವರ್ ಗೆ ಸಮಸ್ಯೆ ಆಗಲಿದೆ. ಹೀಗಾಗಿ ಬಸವಣ್ಣನವರ ಪುತ್ಥಳಿ ಸ್ಥಳಾಂತರ ಮಾಡಬೇಕು ಎಂಬ ಅಧಿಕಾರಿಗಳ ಮಾತಿಗೆ ಬಸವಣ್ಣ ಅನುಮಾಯಿಗಳು ವಿರೋಧ ವ್ಯಕ್ತ ಮಾಡಿದ್ದರು.

ಈ ಹಗ್ಗ-ಜಗ್ಗಾಟದ ನಡುವೆಯೇ ಸೋಮವಾರ ರಾತ್ರಿ ಪುತ್ಥಳಿ ತೆರವುಗೊಳಿಸುವ ಕಾರ್ಯಾಚರಣೆ ನಡೆದಿದೆ. ಇನ್ನು ಇದಕ್ಕೆ ಲಿಂಗಾಯತ ಸಮುದಾಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಏನೂ ಹೇಳದೇ ಈ ರೀತಿ ಮಾಡಿರೋದು ಸರಿಯಲ್ಲ ಎಂದು ಕಿಡಿ ಕಾರಿದ್ದಾರೆ. ಈ ರೀತಿ ಮಾಡೋದು ಸರಿಯಲ್ಲ. ಇದೊಂದು ಕಪ್ಪು ಚುಕ್ಕೆ ಎಂದು ಹೇಳಿದ್ದಾರೆ. ಆದರೆ ಅಧಿಕಾರಿಗಳು ನಾವು ಒಪ್ಪಿಗೆ ಪಡೆದೇ ಸ್ಥಳಾಂತರ ಮಾಡಿದ್ದೇವೆ ಎಂದು ಹೇಳುತ್ತಿದ್ದಾರೆ‌.

ಇನ್ನು ಹೆಚ್ಚಿನ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಬಸವೇಶ್ವರ ಪುತ್ಥಳಿಯನ್ನು ತಾತ್ಕಾಲಿಕವಾಗಿ ಮಾತ್ರ ಇಂದಿರಾ ಗ್ಲಾಸ್ ಆವರಣಕ್ಕೆ ಸ್ಥಳಾಂತರಿಸುತ್ತಿದ್ದೇವೆ. ಫ್ಲೈಓವರ್ ಕಾಮಗಾರಿ ಮುಗಿದ ಬಳಿಕ ಮತ್ತೆ ಬಸವೇಶ್ವರ ಪುತ್ಥಳಿ ಬಸವವನದ ಮೂಲ ಸ್ಥಳಕ್ಕೆ ಸ್ಥಳಾಂತರ ಮಾಡಲಾಗುವುದು ಎಂದು ತೆರವು ಕಾರ್ಯಾಚರಣೆ ಉಸ್ತುವಾರಿಯಲ್ಲಿದ್ದ ಲೋಕೋಪಯೋಗಿ ಎಂಜಿನಿಯರ್ ಗಂಗಾಧರ್ ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read