ಬಾಗಲಕೋಟೆ: ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಆಹಾರದಲ್ಲಿ ವಿಷ ಹಾಕಿರುವ ಅನುಮಾನವಿದೆ ಎಂದು ಆರೋಪಿಸಿರುವ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್, ತಪ್ಪು ಕಲ್ಪನೆಯಿಂದ ಹೇಳಿದ್ದಾಗಿ ಕ್ಷಮೆ ಕೋರಿದ್ದಾರೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ್ ತಿಳಿಸಿದ್ದಾರೆ.
ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯನಾಂದ ಕಾಶಪ್ಪನವರ್, ಸ್ವಾಮೀಜಿಗಳಿಗೆ ವಿಷಪ್ರಾಶನ ಆರೋಪದಲ್ಲಿ ಅರವಿಂದ್ ಬೆಲ್ಲದ್ ನನಗೆ ಕರೆ ಮಾಡಿ ಕ್ಷಮೆ ಕೋರಿದ್ದಾರೆ. ಶ್ರೀಗಳಿಗೆ ವಿಷಪ್ರಾಶನ ಅಂತಾ ತಪ್ಪು ಕಲ್ಪನೆಯಿಂದ ಹೇಳಿಬಿಟ್ಟೆ. ಕ್ಷಮೆ ಇರಲಿ ಎಂದು ಹೇಳಿದ್ದಾರೆ ಎಂದರು.
ಬಾಯಿಗೆ ಬಂದಂಗೆ ಮಾತನಾಡಿದರೆ ಬಗ್ಗುತ್ತಾನೆ ಅಂದುಕೊಂಡಿರಬಹುದು. ಅರವಿಂದ್ ಬೆಲ್ಲದ್ ಅವರು ವಿರೋಧಪಕ್ಷದ ಉಪನಾಯಕರು. ತನಿಖೆಗೆ ಒಂದು ಸಮಿತಿ ಮಾಡಿ ಎಂದು ಮೊನ್ನೆಯೇ ಹೇಳಿದ್ದೇನೆ. ನನ್ನ ಬಳಿ ಕೆಲಸ ಮಾಡುತ್ತಿದ್ದ ಜಾಫರ್ ಹಾಗೂ ಮಾಲತೇಶ್ ಇಬ್ಬರು ಹುಡುಗರನ್ನು ಮಠ ಕಾಯಲು ನೇಮಿಸಿದ್ದೆ ಎಂದು ತಿಳಿಸಿದ್ದಾರೆ.
ಸ್ವಾಮೀಜಿಗಳು ಬಾಗಲಕೋಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರಲ್ಲ, ಅಲ್ಲಿಗೆ ಹೋಗಿ ರಿಪೋರ್ಟ್ ತೆಗೆದುಕೊಳ್ಳಲಿ. ಅನುಮಾನವಿದ್ದರೆ ಆಸ್ಪತ್ರೆ ವರದಿ ಪಡೆದು ನೋಡಲಿ ಎಂದು ತಿರುಗೇಟು ನೀಡಿದ್ದಾರೆ.