BIG NEWS: ಯುವತಿ ಎಂದು ಯುವಕನಿಗೆ ಅಶ್ಲೀಲ ಮೆಸೇಜ್, ನಗ್ನ ವಿಡಿಯೋ ಕಳುಹಿಸಲು ಒತ್ತಾಯ: ಕಾಮುಕನಿಗೆ ಬಿತ್ತು ಧರ್ಮದೇಟು!

ಮಂಗಳೂರು: ಯುವತಿಯೆಂದು ಯುವಕನಿಗೆ ಮೆಸೇಜ್ ಕಳುಹಿಸಿದ ಕಾಮುಕ ನಗ್ನ ವಿಡಿಯೋವನ್ನು ಕಳುಹಿಸುವಂತೆ ಒತ್ತಾಯಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೊಲ್ನಾಡು ಗ್ರಾಮದ ಕುಡ್ತಮುಗೇರಿಯಲ್ಲಿ ನಡೆದಿದೆ.

ತಡರಾತ್ರಿ ನಗ್ನ ವಿಡಿಯೋ ಕಳುಹಿಸುವಂತೆ ಕಾಮುಕ ಒತ್ತಾಯಿಸುತ್ತಿದ್ದ. ಈ ವೇಳೆ ಸಾರ್ವಜನಿಕರು ಕಾಮುಕನನ್ನು ಹಿಡಿದು ಧರ್ಮದೇಟು ನೀಡಿದ್ದಾರೆ. ಪಂಜಾಜೆ ನಿವಾಸಿ ಸವಾದ್ (20) ಸಾರ್ವಜನಿಕರಿಂದ ಧರ್ಮದೇಟು ತಿಂದ ಯುವಕ.

ಸಾವದ್ ಅಂಗಡಿಯೊಂದರಲ್ಲಿ ವಸ್ತು ಖರೀದಿಸಿ ಹಣವಿಲ್ಲ ಎಂದು ಹೇಳಿ ಗೂಗಲ್ ಪೇ ಮಾಡ್ತೀನಿ. ಗೂಗಲ್ ಪೇ ನಂಬರ್ ಕೊಡಿ ಎಂದು ಕೇಳಿದ್ದ. ಅಂಗಡಿಯಲ್ಲಿದ್ದ ಯುವತಿ ತನ್ನ ನಂಬರ್ ಬದಲಾಗಿ ಅಂಗಡಿಯಲ್ಲಿದ್ದ ಮತ್ತೋರ್ವನ ನಂಬರ್ ಕೊಟ್ಟಿದ್ದಾಳೆ. ಹೀಗೆ ಫೋನ್ ನಂಬರ್ ಪಡೆದ ಸಾವದ್ ಅದು ಯುವತಿಯ ಮೊಬೈಲ್ ನಂಬರ್ ಎಂದು ತಿಳಿದು ಮೆಸೇಜ್ ಮಾಡಲು ಆರಂಭಿಸಿದ್ದ. ಸಾಲದ್ದಕ್ಕೆ ಮಧ್ಯರಾತ್ರಿ ನಗ್ನ ವಿಡಿಯೋ ಕಳುಹಿಸುವಂತೆ ಒತ್ತಾಯಿಸತೊಡಗಿದ್ದ. ಅಲ್ಲದೇ ನಾಳೆ ಮತ್ತೆ ಅಂಗಡಿ ಬಳಿ ಬರುತ್ತೇನೆ ಎಂದು ಸಂದೇಶ ಕಳುಹಿಸಿದ್ದ.

ಮರುದಿನ ಯುವತಿ ಭೇಟಿಗೆಂದು ಚಾಕೋಲೇಟ್ ಹಿಡಿದು ಅಂಗಡಿ ಬಳಿ ಬಂದಿದ್ದ ಸಾವದ್, ಅಂಗಡಿಗೆ ನುಗ್ಗಿ ಯುವತಿ ಬಳಿ ಮಾತನಾಡಲು ಮುಂದಾಗಿದ್ದಾನೆ. ಈ ವೇಳೆ ಮೊದಲೇ ಪ್ಲಾನ್ ಮಾಡಿದಂತೆ ಯುವತಿ ಕಿರುಚಿಕೊಂಡಿದ್ದಾಳೆ. ಅಂಗಡಿ ಅಕ್ಕಪಕ್ಕದಲ್ಲಿ ಅವಿತಿದ್ದ ಜನರು ಸಾವದ್ ನನ್ನು ಹಿಡಿದು ಹಿಗ್ಗಾ ಮುಗ್ಗಾ ಥಳಿಸಿ ಧರ್ಮದೇಟು ನೀಡಿದ್ದಾರೆ.

ಸಾವದ್ ಬೆಂಗಳೂರಿನಲ್ಲಿ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ರಂಜಾನ್ ಹಿನ್ನೆಲೆಯಲ್ಲಿ ಊರಿಗೆ ಬಂದವನು ಕೆಟ್ಟ ಕೆಲಸ ಮಾಡಲು ಹೋಗಿ ಸಿಕ್ಕಿಬಿದ್ದಿದ್ದಾನೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read