ಎಂದಿನಂತೆ ಕೆಲಸಕ್ಕೆ ಹೋಗಿದ್ದ ಬ್ಯಾಂಕ್ ಮ್ಯಾನೇಜರ್ ನಾಪತ್ತೆ

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆ ಎನ್ಆರ್ ಪುರ ತಾಲೂಕು ಮುತ್ತಿನಕೊಪ್ಪದ ಕೆನರಾ ಬ್ಯಾಂಕ್ ಶಾಖೆಯ ಮ್ಯಾನೇಜರ್ ಕೆ. ರವಿ ನಾಪತ್ತೆಯಾಗಿದ್ದು, ಎನ್ಆರ್ ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರವಿಯವರ ತಂದೆ ಕೆ. ಕಾಳಿಯಪ್ಪನ್ ಮಂಗಳವಾರ ಎನ್ಆರ್ ಪುರ ಠಾಣೆಗೆ ದೂರು ನೀಡಿದ್ದಾರೆ. ಮುತ್ತಿನಕೊಪ್ಪ ಕೆನರಾ ಬ್ಯಾಂಕ್ ಶಾಖೆಯಲ್ಲಿ ಮ್ಯಾನೇಜರ್ ಆಗಿರುವ ತಮ್ಮ ಪುತ್ರ ಕೆ. ರವಿ ಶಿವಮೊಗ್ಗದಲ್ಲಿ ಮನೆ ಮಾಡಿದ್ದು, ಪ್ರತಿದಿನ ಶಿವಮೊಗ್ಗದಿಂದ ಮುತ್ತಿನಕೊಪ್ಪಕ್ಕೆ ಓಡಾಡುತ್ತಿದ್ದರು. ಆಗಸ್ಟ್ 26ರಂದು ಸೋಮವಾರ ಬೆಳಗ್ಗೆ ಶಿವಮೊಗ್ಗದಿಂದ ಮುತ್ತಿನ ಕೊಪ್ಪಕ್ಕೆ ಬಂದವರು ಬಸ್ ನಿಲ್ದಾಣಕ್ಕೆ ಬ್ಯಾಂಕಿನ ಅಟೆಂಡರ್ ರಾಜು ಅವರನ್ನು ಕರೆಸಿಕೊಂಡಿದ್ದಾರೆ. ಅವರ ಕೈಗೆ ಬ್ಯಾಂಕಿನ ಬೀಗದ ಕೀಗಳನ್ನು ನೀಡಿ ಆರೋಗ್ಯ ಸರಿಯಿಲ್ಲದ ಕಾರಣ ಮಣಿಪಾಲಕ್ಕೆ ಹೋಗುವದಾಗಿ ತಿಳಿಸಿ ಅಲ್ಲಿಂದ ತೆರಳಿದ್ದು, ನಂತರ ಅವರ ನಾಪತ್ತೆಯಾಗಿದ್ದಾರೆ. ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ. ಸಂಬಂಧಿಕರ ಮನೆಗಳಲ್ಲಿ ನಾನು ಮತ್ತು ಕೆ. ರವಿ ಪತ್ನಿ ವಿಚಾರಿಸಿದ್ದು, ಎಲ್ಲಿಯೂ ಪತ್ತೆಯಾಗಿಲ್ಲ. ಅವರನ್ನು ಪತ್ತೆ ಮಾಡಿಕೊಡಬೇಕೆಂದು ಮನವಿ ಮಾಡಿದ್ದಾರೆ.

ಎನ್ಆರ್ ಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read