ಬ್ಯಾಂಕ್ ಮ್ಯಾನೇಜರ್ ನಿಂದಲೇ ವಂಚನೆ: ಗ್ರಾಹಕರು ಒತ್ತೆ ಇಟ್ಟಿದ್ದ 6.5 ಕೆಜಿ ಚಿನ್ನಾಭರಣ ಕಳವು

ಮಂಗಳೂರು: ಗ್ರಾಹಕರು ಒತ್ತೆ ಇಟ್ಟಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಮಂಗಳೂರು ನಗರದ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಪ್ರಬಂಧಕ ಕಳವು ಮಾಡಿದ್ದಾನೆ.

ಕಳವು ಮಾಡಿದ ಚಿನ್ನಾಭರಣಗಳನ್ನು ಬೇರೆ ಸೊಸೈಟಿಯಲ್ಲಿ ಒತ್ತೆ ಇಟ್ಟು ಸಾಲ ಪಡೆದು ವಂಚಿಸಿದ್ದಾನೆ. ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಕಂಕನಾಡಿ ನಗರ ಠಾಣೆ ವ್ಯಾಪ್ತಿಯಲ್ಲಿರುವ ಸೊಸೈಟಿಯೊಂದರಲ್ಲಿ ಈ ಅಕ್ರಮ ನಡೆದಿದೆ. ಅದೇ ಸೊಸೈಟಿಯ ಮ್ಯಾನೇಜರ್ 6.5 ಕೆಜಿ ಚಿನ್ನಾಭರಣ ಕಳವು ಮಾಡಿ ಬೇರೆ ಸೊಸೈಟಿಯಲ್ಲಿ ಅಡವಿಟ್ಟಿದ್ದಾನೆ. ಶಕ್ತಿನಗರದ ಸೊಸೈಟಿಯಲ್ಲಿ ಈತ ಒತ್ತೆ ಇಟ್ಟಿದ್ದ 2.2 ಕೆಜಿ ಚಿನ್ನವನ್ನು ಪೋಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮ್ಯಾನೇಜರ್ ಪರವಾಗಿ ಚಿನ್ನ ಒತ್ತೆ ಇಟ್ಟು ಸಾಲ ಪಡೆದಿದ್ದ ಸರಿಪಲ್ಲ ನಿವಾಸಿ ಶೇಕ್ ಮಹಮ್ಮದ್ ಎಂಬುವನನ್ನು ಬಂಧಿಸಲಾಗಿದೆ.

ಈ ವಂಚನೆ ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಅವರ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಜೂನ್ 17ರಂದು ಎಫ್ಐಆರ್ ದಾಖಲಾಗಿದೆ. ವಿದೇಶಕ್ಕೆ ಪರಾರಿಯಾಗಿದ್ದ ಮ್ಯಾನೇಜರ್ ನಂತರ ಕೋರ್ಟ್ ಗೆ  ಶರಣಾಗಿದ್ದಾರೆ ಎನ್ನಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read