ಬ್ಯಾಂಕ್ ಗ್ರಾಹಕರಿಗೆ ಮುಖ್ಯ ಮಾಹಿತಿ: ಇನ್ನು ಲಾಕರ್ ನಲ್ಲಿ ಹಣ, ಕರೆನ್ಸಿ ನೋಟು ಇಡುವಂತಿಲ್ಲ

ನವದೆಹಲಿ: ಬ್ಯಾಂಕ್ ಲಾಕರ್ ನಲ್ಲಿ ಕರೆನ್ಸಿಗೆ ನಿಷೇಧ ಹೇರಲಾಗಿದ್ದು, ಆರ್‌ಬಿಐ ಪರಿಷ್ಕೃತ ಮಾರ್ಗಸೂಚಿ ಪ್ರಕಟಿಸಿದೆ.

ಡಿಸೆಂಬರ್ 31ರೊಳಗೆ ಲಾಕರ್ ಹೊಂದಿದವರು ಪರಿಷ್ಕೃತ ಒಪ್ಪಂದಕ್ಕೆ ಬದ್ಧವಾಗಿ ಇರಬೇಕೆಂದು ಹೇಳಲಾಗಿದೆ. ಲಾಕರ್ ಗಳಲ್ಲಿ ಆಭರಣ, ಅಮೂಲ್ಯ ದಾಖಲೆ ಇಡಬಹುದು. ಜನನ, ಮದುವೆ ಪ್ರಮಾಣ ಪತ್ರ, ಸಾಲ ಪತ್ರ, ಉಳಿತಾಯ ಬಾಂಡ್, ವಿಮೆ ಪಾಲಿಸಿ ಮೊದಲಾದ ವೈಯಕ್ತಿಕ ದಾಖಲೆಗಳನ್ನು ಲಾಕರ್ ಗಲ್ಲಿ ಇಡಲು ಅನುಮತಿ ನೀಡಲಾಗಿದೆ. ಆದರೆ ಹಣ ಮತ್ತು ಕರೆನ್ಸಿ ನೋಟುಗಳನ್ನು ಲಾಕರ್ ಗಳಲ್ಲಿ ಇಡುವಂತಿಲ್ಲ ಎಂದು ಆರ್.ಬಿ.ಐ. ಪರಿಷ್ಕೃತ ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

ಬ್ಯಾಂಕಿನ ನಿರ್ಲಕ್ಷ ಅಥವಾ ಉದ್ಯೋಗಿಯಿಂದ ವಂಚನೆ ಮೊದಲಾದ ಕೃತ್ಯಗಳಿಂದ ಲಾಕರ್ ಹೊಂದಿದ ಗ್ರಾಹಕರಿಗೆ ನಷ್ಟವಾದಲ್ಲಿ ಬ್ಯಾಂಕುಗಳು ಅದರ ಹೊಣೆ ಹೊರಲಿವೆ. ಲಾಕರ್ ನ ವಾರ್ಷಿಕ ಶೇಕಡ 100ರಷ್ಟು ಪರಿಹಾರ ಹಣವನ್ನು ಬ್ಯಾಂಕುಗಳು ನೀಡಬೇಕಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ ಪರಿಷ್ಕೃತ ಲಾಕರ್ ಒಪ್ಪಂದದ ಅನ್ವಯ ಶಸ್ತ್ರಾಸ್ತ್ರ, ಸ್ಪೋಟಕ, ಮಾದಕ ವಸ್ತು, ರೇಡಿಯೋ ಆಕ್ಟಿವ್ ವಸ್ತು, ಅಕ್ರಮ ವಸ್ತು, ಬ್ಯಾಂಕ್ ಗ್ರಾಹಕರು ಮತ್ತು ಬ್ಯಾಂಕಿಗೆ ಹಾನಿ ಉಂಟು ಮಾಡುವ ವಸ್ತುಗಳಿಗೆ ನಿಷೇಧ ಹೇರಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read