ಕೋಲ್ಕತ್ತಾದಲ್ಲಿ ಬಾಂಗ್ಲಾದೇಶದ ಸಂಸದನ ಭೀಕರ ಕೊಲೆ: ದೇಹವನ್ನು ತುಂಡರಿಸಿ, ಚರ್ಮ ಸುಲಿದು, ಮೂಳೆ ಬೇರ್ಪಡಿಸಿದ್ದ ಹಂತಕರು

ಕೋಲ್ಕತ್ತಾ: ಕೋಲ್ಕತ್ತಾದಲ್ಲಿ ಬಾಂಗ್ಲಾದೇಶದ ಸಂಸದ ಅನ್ವರುಲ್ ಅಜೀಮ್ ಅನಾರ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

ಕೋಲ್ಕತ್ತಾಗೆ ಬಂದಿದ್ದ ಸಂಸದ ಅನ್ವರುಲ್ ಅಜೀಮ್ ಅನಾರ್, ಎರಡು ದಿನಗಳ ನಂತರ ನಾಪತ್ತೆಯಾಗಿದ್ದರು. ಇದೀಗ ಬಾಂಗ್ಲಾದೇಶದ ಅಕ್ರಮ ವಲಸಿಗರಿಂದ ಸಂಸದ ಹತ್ಯೆಯಾಗಿರುವ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

ಮೇ 14ರಂದು ನಾಪತ್ತೆಯಾಗಿದ್ದ ಸಂಸದ ಅನ್ವರುಲ್ ಅಜೀಮ್ ಅನಾರ್ ರನ್ನು ಅಕ್ರಮ ವಲಸಿಗರು ಕೋಲ್ಕತ್ತಾದ ಅಪಾರ್ಟ್ ಮೆಂಟ್ ಒಂದರಲ್ಲಿ ಭೀಕರವಾಗಿ ಹತ್ಯೆ ಮಾಡಿದ್ದಾರೆ. ಬಳಿಕ ದೇಹವನ್ನು ತುಂಡು ತುಂಡನ್ನಾಗಿ ಮಾಡಿ ಫ್ರೀಡ್ಜ್ ನಲ್ಲಿ ಇಟ್ಟಿದ್ದರು. ಅಷ್ಟೇ ಅಲ್ಲ ಚರ್ಮ ಸುಲಿದು, ಮೂಳೆ, ಮಾಂಸ ಬೇರ್ಪಡಿಸಿದ್ದರು.

ನಂತರ ಹಂತಕರು ಕೋಲ್ಕತ್ತಾದ ವಿವಿಧ ಭಾಗಗಳಲ್ಲಿ ಸಂಸದನ ದೇಹದ ತುಂಡುಗಳನ್ನು ಎಸೆದಿದ್ದಾರೆ. ಬಾಂಗ್ಲಾದ ಅಕ್ರಮ ವಲಸಿಗ ಅಖ್ತರುಜ್ಜಮಾನ್ ಈ ಕೊಲೆಯ ಮಾಸ್ಟರ್ ಮೈಂಡ್ ಆಗಿದ್ದು, ಈತ ಅಮೆರಿಕ ಪ್ರಜೆ ಆಗಿದ್ದಾನೆ. ಈತನ ಸೂಚನೆ ಮೇರೆಗೆ ನಾಲ್ವರು ಹಂತಕರು ಸಂಸದ ಅನ್ವರುಲ್ ಅಜೀಮ್ ಹತ್ಯೆ ಮಾಡಿದ್ದಾರೆ ಎಂದು ತನಿಖೆ ವೇಳೆ ತಿಳಿದುಬಂದಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read