ನಕಲಿ ಆಧಾರ್, ಪಡಿತರ ಚೀಟಿ ಸೇರಿ ಇತರೆ ದಾಖಲೆ ಹೊಂದಿದ್ದ ಬಾಂಗ್ಲಾದೇಶದ ನಟಿ, ಮಾಡೆಲ್ ಅರೆಸ್ಟ್

ಕೋಲ್ಕತ್ತಾ: ನಕಲಿ ಆಧಾರ್ ಮತ್ತು ಇತರ ಭಾರತೀಯ ದಾಖಲೆಗಳನ್ನು ಹೊಂದಿದ್ದ ಬಾಂಗ್ಲಾದೇಶಿ ಮಾಡೆಲ್ ಬಂಧಿಸಲಾಗಿದೆ.

ನಿರ್ದಿಷ್ಟ ಮಾಹಿತಿಯ ಆಧಾರದ ಮೇಲೆ, ಕೋಲ್ಕತ್ತಾ ಪೊಲೀಸರ ರೌಡಿ ನಿಗ್ರಹ ದಳವು ಭಾರತದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದಕ್ಕಾಗಿ ಬಾಂಗ್ಲಾದೇಶಿ ಮಹಿಳೆಯನ್ನು ಬಂಧಿಸಿದೆ. ಆರೋಪಿಯನ್ನು ಬಾಂಗ್ಲಾದೇಶದ ಬರಿಸಲ್ ನಿವಾಸಿ ಶಾಂತಾ ಪಾಲ್(28) ಎಂದು ಗುರುತಿಸಲಾಗಿದೆ. ಜಾದವ್‌ಪುರ ಪ್ರದೇಶದ ಬಾಡಿಗೆ ಅಪಾರ್ಟ್‌ಮೆಂಟ್‌ ನಲ್ಲಿದ್ದ ಆಕೆಯನ್ನು ಬಂಧಿಸಲಾಗಿದೆ. ಆಕೆಯಿಂದ ಆಧಾರ್ ಕಾರ್ಡ್, ಮತದಾರರ ಕಾರ್ಡ್ ಮತ್ತು ಪಡಿತರ ಚೀಟಿಯನ್ನು ಸಹ ವಶಪಡಿಸಿಕೊಳ್ಳಲಾಗಿದೆ.

ನಿರ್ದಿಷ್ಟ ದೂರಿನ ಆಧಾರದ ಮೇಲೆ, ನಾವು ಈ ಪ್ರಕರಣವನ್ನು ದಾಖಲಿಸಿದ್ದೇವೆ ಮತ್ತು ತನಿಖೆಯ ಸಮಯದಲ್ಲಿ ನಾವು ಬಾಂಗ್ಲಾದೇಶಿ ಪ್ರಜೆಯಾಗಿರುವ ಮಹಿಳೆಯನ್ನು ಬಂಧಿಸಿದ್ದೇವೆ. ಅವರು ಈಗ ಪೊಲೀಸ್ ವಶದಲ್ಲಿದ್ದಾರೆ. ತನಿಖೆ ನಡೆಯುತ್ತಿದೆ ಎಂದು ಕೋಲ್ಕತ್ತಾ ಪೊಲೀಸರ ಜಂಟಿ ಆಯುಕ್ತ (ಅಪರಾಧ) ರೂಪೇಶ್ ಕುಮಾರ್ ತಿಳಿಸಿದ್ದಾರೆ.

ಆಕೆಯ ಬಾಡಿಗೆ ಮನೆಯಲ್ಲಿ ಹುಡುಕಾಟದ ಸಮಯದಲ್ಲಿ ಆಕೆಯ ಹೆಸರಿನಲ್ಲಿ ನೀಡಲಾದ ಹಲವಾರು ಬಾಂಗ್ಲಾದೇಶದ ಪಾಸ್‌ಪೋರ್ಟ್‌ಗಳು, ರೀಜೆಂಟ್ ಏರ್‌ವೇಸ್(ಬಾಂಗ್ಲಾದೇಶ) ಉದ್ಯೋಗಿ ಕಾರ್ಡ್, ಢಾಕಾದಲ್ಲಿ ಮಾಧ್ಯಮಿಕ ಶಿಕ್ಷಣದ ಪ್ರವೇಶ ಪತ್ರ, ವಿಭಿನ್ನ ವಿಳಾಸಗಳಲ್ಲಿ ನೋಂದಾಯಿಸಲಾದ ಎರಡು ಆಧಾರ್ ಕಾರ್ಡ್‌ಗಳು, ಭಾರತೀಯ ಮತದಾರರು/ಎಪಿಕ್ ಕಾರ್ಡ್ ಮತ್ತು ಪಡಿತರ ಚೀಟಿ, ಇವೆಲ್ಲವೂಗಳಲ್ಲೂ ವಿಭಿನ್ನ ವಿಳಾಸಗಳು ಪತ್ತೆಯಾಗಿದ್ದು, ಅವನ್ನು ವಶಪಡಿಸಿಕೊಳ್ಳಲಾಗಿದೆ.

2024ರ ಕೊನೆಯಲ್ಲಿ ಒಬ್ಬ ಪುರುಷನೊಂದಿಗೆ ಆಕೆ ಮನೆಯನ್ನು ಬಾಡಿಗೆಗೆ ಪಡೆದರು. ಮಹಿಳೆಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಆಗಸ್ಟ್ 8 ರವರೆಗೆ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ.

ಆಕೆ ಭಾರತದಲ್ಲಿ ಉಳಿಯಲು ಯಾವುದೇ ಮಾನ್ಯ ವೀಸಾ ಹೊಂದಿಲ್ಲ. ಪ್ರಸ್ತುತ ಆಕೆ ಆಧಾರ್, ಮತದಾರರ ಚೀಟಿ ಮತ್ತು ಪಡಿತರ ಚೀಟಿಗಳನ್ನು ಹೇಗೆ ಪಡೆದುಕೊಂಡಳು ಎಂಬುದರ ಕುರಿತು ಪ್ರಶ್ನಿಸಲಾಗುತ್ತಿದೆ. ಆಕೆಯ ಬಳಿಯಿಂದ ವಶಪಡಿಸಿಕೊಂಡ ಎರಡು ಆಧಾರ್ ಕಾರ್ಡ್‌ಗಳಲ್ಲಿ ಒಂದರಲ್ಲಿ ಕೋಲ್ಕತ್ತಾ ವಿಳಾಸವಿದ್ದರೆ, ಇನ್ನೊಂದರಲ್ಲಿ ಬುರ್ದ್ವಾನ್ ವಿಳಾಸವಿದೆ.

ಮೂಲಗಳ ಪ್ರಕಾರ, ಆರೋಪಿ ಬಾಂಗ್ಲಾದೇಶದಲ್ಲಿ ನಟಿಯಾಗಿ ಕೆಲಸ ಮಾಡಿದ್ದಾಳೆ. ಅವರು ಬಾಂಗ್ಲಾದೇಶದಲ್ಲಿ ಹಲವಾರು ಟಿವಿ ಚಾನೆಲ್‌ಗಳು ಮತ್ತು ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿಯೂ ಕೆಲಸ ಮಾಡಿದ್ದಾರೆ ಮತ್ತು ಅಲ್ಲಿ ಹಲವಾರು ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read