ಬಾಂಗ್ಲಾ ಜೈಲಿನಲ್ಲಿ ಹಿಂದೂ ಅರ್ಚಕ ಚಿನ್ಮಯ್ ಕೃಷ್ಣ ದಾಸ್ ‘ಗಂಭೀರ’; ಡೊನಾಲ್ಡ್ ಟ್ರಂಪ್ ಸಹಾಯ ಕೋರಿದ ಬೆಂಬಲಿಗರು

ಢಾಕಾ: ಬಾಂಗ್ಲಾದೇಶದ ಹಿಂದೂ ಅರ್ಚಕ, ಸನ್ಯಾಸಿ ಚಿನ್ಮಯ್ ಕೃಷ್ಣ ದಾಸ್ ತೀವ್ರ ಅಸ್ವಸ್ಥರಾಗಿದ್ದಾರೆ. ಜೈಲಿನಲ್ಲಿ ಸರಿಯಾದ ಚಿಕಿತ್ಸೆ ನೀಡುತ್ತಿಲ್ಲ ಎಂದು ಹೇಳಲಾಗಿದೆ.

ಅವರ ಶೀಘ್ರ ಚೇತರಿಕೆಗಾಗಿ, ಬಾಂಗ್ಲಾದೇಶದ ದೇವಾಲಯಗಳಲ್ಲಿ ಜನವರಿ 1 ರಂದು ಪ್ರಾರ್ಥನೆ ನಡೆಸಲು ಕರೆ ನೀಡಲಾಗಿದೆ.

ಆಂಗ್ರಿ ಕೇಸರಿ ಸಾಮಾಜಿಕ ಮಾಧ್ಯಮ ಪೋಸ್ಟ್ ನಲ್ಲಿ ಚಿನ್ಮಯ್ ಕೃಷ್ಣ ಪ್ರಭು ಜೈಲಿನಲ್ಲಿ ಗಂಭೀರವಾಗಿ ಅಸ್ವಸ್ಥರಾಗಿದ್ದಾರೆ, ಎರಡು ಬಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ, ಅವರಿಗೆ ಸರಿಯಾದ ಚಿಕಿತ್ಸೆಯ ಕೊರತೆಯಿದೆ. ಅವರ ಚೇತರಿಕೆಗಾಗಿ ಬಾಂಗ್ಲಾದೇಶದ ದೇವಾಲಯಗಳಲ್ಲಿ ಜನವರಿ 1 ಕ್ಕೆ ಪ್ರಾರ್ಥನೆ ಸಲ್ಲಿಸಲು ಕರೆ ನೀಡಿದ್ದಾರೆ.

ಇಸ್ಕಾನ್‌ನ ಮಾಜಿ ನಾಯಕ ಚಿನ್ಮಯ್ ದಾಸ್ ಅವರನ್ನು ನವೆಂಬರ್ 25 ರಂದು ಢಾಕಾದ ಹಜರತ್ ಶಹಜಲಾಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಯಿತು.

ಚಟ್ಟೋಗ್ರಾಮ್‌ ನ ನ್ಯಾಯಾಲಯವು ಅವರನ್ನು ಜೈಲಿಗೆ ಕಳುಹಿಸಿತು, ದೇಶದ ಧ್ವಜವನ್ನು ಅಗೌರವಿಸಿದ ಆರೋಪದ ಮೇಲೆ, ದೇಶದ್ರೋಹದ ಆರೋಪದ ಮೇಲೆ ಅವರ ಜಾಮೀನು ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿತು.

ಪ್ರಕರಣದ ವಿಚಾರಣೆಯು ಜನವರಿ 2ರಂದು ನಡೆಯಲಿದೆ.

ಬಾಂಗ್ಲಾದೇಶದ ಅಲ್ಪಸಂಖ್ಯಾತ ಗುಂಪು ಭಾನುವಾರ ಚಿನ್ಮೋಯ್ ಕೃಷ್ಣ ದಾಸ್ ಅವರ “ತಕ್ಷಣ ಬಿಡುಗಡೆ” ಗೆ ಕರೆ ನೀಡಿದ್ದು, ಬಂಧಿತ ಹಿಂದೂ ಸನ್ಯಾಸಿ ವಿರುದ್ಧದ ಪ್ರಕರಣವು ಸುಳ್ಳು ಎಂದು ತಿಳಿಸಿದೆ.

ಬಾಂಗ್ಲಾದೇಶ ಹಿಂದೂ ಬೌದ್ಧ ಕ್ರಿಶ್ಚಿಯನ್ ಯೂನಿಟಿ ಕೌನ್ಸಿಲ್(BHBCOP) ದಾಸ್ ಅವರನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದೆ.

ಬಾಂಗ್ಲಾದೇಶದ ಅಮೆರಿಕನ್ ಹಿಂದೂಗಳು, ಬೌದ್ಧರು ಮತ್ತು ಕ್ರಿಶ್ಚಿಯನ್ನರ ಒಕ್ಕೂಟವು ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದ ಡೊನಾಲ್ಡ್ ಟ್ರಂಪ್ ಅವರಿಗೆ ಚಿನ್ಮಯ್ ದಾಸ್ ವಿಚಾರದಲ್ಲಿ ಮಧ್ಯಪ್ರವೇಶಿಸಿ ದೇಶದಲ್ಲಿ ಅಲ್ಪಸಂಖ್ಯಾತ ಸಮುದಾಯಗಳನ್ನು ರಕ್ಷಿಸಲು ಸಹಾಯ ಮಾಡುವಂತೆ ಒತ್ತಾಯಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read