ಬಕೆಟ್​ ಜಾಹೀರಾತಿಗೆ ಹೊಸ ರೂಪ: ವೈರಲ್​ ವಿಡಿಯೋ ನೋಡಿ ನೆಟ್ಟಿಗರು ಫಿದಾ

ಉತ್ಪನ್ನಗಳನ್ನು ಮಾರಾಟ ಮಾಡಲು ನವೀನ ಮಾರುಕಟ್ಟೆ ಕಲ್ಪನೆಯೊಂದಿಗೆ ಬರುವುದು ನಿಜಕ್ಕೂ ಕಠಿಣವಾಗಿದೆ. ಅದರಲ್ಲೂ ಇತರ ಬ್ರಾಂಡ್‌ಗಳಿಂದ ಸಾಕಷ್ಟು ಪೈಪೋಟಿ ಇರುವಾಗ ಕಂಪೆನಿಗಳು ತಮ್ಮ ಉತ್ಪನ್ನಗಳನ್ನು ಗ್ರಾಹಕರಿಗೆ ಸಾಕಷ್ಟು ಲಾಭದಾಯಕವಾಗಿಸಲು ವಿವಿಧ ರೀತಿಯಲ್ಲಿ ಯೋಚಿಸಬೇಕಾಗುತ್ತದೆ.

ಬಾಂಗ್ಲಾದೇಶದ ಪ್ಲಾಸ್ಟಿಕ್ ಬ್ರ್ಯಾಂಡ್, ಆರ್​ಎಫ್​ಎಲ್​ನ ಸೃಜನಾತ್ಮಕ ತಂಡವು ತಮ್ಮ ಜಾಹೀರಾತು ಪ್ರಕಟಿಸಿರುವ ರೀತಿಗೆ ಜನರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಅವರು ಈ ಜಾಹೀರಾತನ್ನು ಶೇರ್​ ಮಾಡಿಕೊಂಡಿದ್ದಾರೆ.

ಈ ಪೋಸ್ಟ್‌ನಲ್ಲಿ, ಬಕೆಟ್ ಕಂಪೆನಿಯ ಜಾಹೀರಾತನ್ನು ತೋರಿಸುವ ವಿಡಿಯೋ ಜನರನ್ನು ತೀವ್ರವಾಗಿ ನಗುವಂತೆ ಮಾಡಿದೆ. ಆರ್​ಎಫ್​ಎಲ್​ ಕಂಪೆನಿಯು ಕೆಂಪು ಬಕೆಟ್‌ನೊಂದಿಗೆ ನಾಯಕ ಖಳನಾಯಕನನ್ನು ಎದುರಿಸುವುದರೊಂದಿಗೆ ವಿಡಿಯೋ ಪ್ರಾರಂಭವಾಗುತ್ತದೆ. ಜಾಹೀರಾತು ಮುಂದುವರೆದಂತೆ, ನಾಯಕನು ಟ್ರಕ್‌ಗಳನ್ನು ತಿರುಗಿಸುತ್ತಾನೆ ಮತ್ತು ಕೆಂಪು ಬಕೆಟ್ ಎಂಬ ಅಂತಿಮ ಆಯುಧದಿಂದ ವಿಲನ್​ ಅನ್ನು ಹೊಡೆಯುವುದನ್ನು ಕಾಣಬಹುದು.

ಕೊನೆಯಲ್ಲಿ, ನಾಯಕನು ತನ್ನ ಬಕೆಟ್ ‘ಆಯುಧ’ಕ್ಕೆ ಧನ್ಯವಾದಗಳು ಎಂದು ಹೇಳುವ ಮೂಲಕ ಜಾಹೀರಾತು ಕೊನೆಗೊಳ್ಳುತ್ತದೆ. ಬಕೆಟ್‌ಗೆ ‘ವಿಶಿಷ್ಟ’ ಎಂದು ಹೆಸರಿಸಲಾಗಿದೆ ಮತ್ತು ಟ್ಯಾಗ್‌ಲೈನ್ ಅನ್ನು ಬಂಗಾಳಿಯಿಂದ ಅನುವಾದಿಸಿದಾಗ ‘ಅತ್ಯಂತ ಗಟ್ಟಿಯಾದ ಬಕೆಟ್’ ಎಂದು ಬರೆಯಲಾಗಿದೆ. ಈ ವಿಡಿಯೋವನ್ನು 30 ಸಾವಿರಕ್ಕೂ ಹೆಚ್ಚು ಜನರು ನೋಡಿದ್ದು, ಟನ್‌ಗಳಷ್ಟು ಪ್ರತಿಕ್ರಿಯೆಗಳು ಬಂದಿವೆ. ವಿಶೇಷವಾದ ಜಾಹೀರಾತು ಪರಿಕಲ್ಪನೆಗೆ ಜನರು ಫಿದಾ ಆಗಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read